– ತೀವ್ರ ಗಾಯದಿಂದ ಪತ್ನಿ ಸಾವು ಬದುಕಿನ ನಡುವೆ ಹೋರಾಟ
ಹಾಸನ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ “(Holenarasipur) ತಾಲೂಕಿನ ಬಿಟ್ಟಗೌಡನಹಳ್ಳಿಯಲ್ಲಿ ನಡೆದಿದೆ. ಮಡದಿಯನ್ನು ಕೊಲೆ ಮಾಡಿದ್ದೇನೆ ಅಂತಾ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ ಎರಡೂವರೆ ವರ್ಷಗಳ ಹಿಂದೆ ಬಿಟ್ಟಗೌಡನಹಳ್ಳಿಯ ಬಿಂದು ಎಂಬ ಮಹಿಳೆಯೊಂದಿಗೆ (Women) ಪ್ರಶಾಂತ್ ಕುಮಾರ್ ವಿವಾಹವಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಕಳೆದ ಮೂರು ತಿಂಗಳಿನಿಂದ ತವರುಮನೆಯಲ್ಲಿದ್ದಳು. ತೀವ್ರ ಗಾಯಗೊಂಡ ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದುಬಂದಿದೆ. ಇದನ್ನೂ ಓದಿ: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂ. ಕಳ್ಳತನ!
Advertisement
Advertisement
ನಡೆದಿದ್ದೇನು?
ತನ್ನನ್ನು ಬಿಟ್ಟು ತವರು ಮನೆ ಸೇರಿದ್ದ ಪತ್ನಿ ಮೇಲಿನ ಸಿಟ್ಟಿನಿಂದ ಆಕೆ ಇದ್ದಲ್ಲಿಗೇ ಬಂದ ಪತಿರಾಯ, ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮನೆ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕುಡುಗೋಲಿನಿಂದ ಹೆಂಡತಿಯ ಕುತ್ತಿಗೆ ಕೊಯ್ದು ಹಲ್ಲೆ ಮಾಡಿದ್ದಾನೆ. ಈ ವೇಳೆ ಪತ್ನಿ ಗಂಡನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ನಶೆಯಲ್ಲಿದ್ದ ಪತಿ, ತನ್ನ ಪತ್ನಿಯನ್ನ ಕೊಲೆ ಮಾಡಿದ್ದೇನೆಂದು ಹೆದರಿ ಪತ್ನಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?
Advertisement
ಅಕ್ರಮ ಸಂಬಂಧವಿತ್ತೇ?
ಕಳೆದ 2 ವರ್ಷಗಳ ಹಿಂದೆ ಪ್ರಶಾಂತ್ಕುಮಾರ್ ಹಾಗೂ ಬಿಂದು ಇಬ್ಬರ ವಿವಾಹವಾಗಿತ್ತು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಪ್ರಶಾಂತ್ ಗಾಂಜಾ ವ್ಯಸನಿಯಾಗಿದ್ದು, ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಬಿಂದು, ಮರ್ನಾಲ್ಕು ತಿಂಗಳ ಹಿಂದೆ ಹಳೇಕೋಟೆ ಹೋಬಳಿ ಬಿಟ್ಟಗೋಡನಹಳ್ಳಿಯಲ್ಲಿರುವ ತನ್ನ ತಾಯಿ ಮನೆಗೆ ಬಂದು ಉಳಿದಿಕೊಂಡಿದ್ದರು. ಜ.8 ಬಿಂದು ತಂದೆ-ತಾಯಿ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಅಕ್ಕ ಸಂಧ್ಯಾ ಹಾಗೂ ಅಕ್ಕನ ಮಕ್ಕಳೊಂದಿಗೆ ಬಿಂದು ವಾಸವಿದ್ದಳು.
Advertisement
ಮಂಗಳವಾರ (ಜ.9) ಮಧ್ಯಾಹ್ನ ಸುಮಾರು 2.45ರ ಸಮಯಕ್ಕೆ ಮದ್ಯ, ಗಾಂಜಾ ಸೇವಿಸಿದ್ದ ಪ್ರಶಾಂತ್ಕುಮಾರ್ ಮಡದಿ ವಾಸವಿದ್ದ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಪತಿಯನ್ನು ಕಂಡ ಕೂಡಲೇ ಬಿಂದು ಹಾಗೂ ಇತರರು, ಮನೆಯ ಹಿಂದಿನ ಹಾಗೂ ಮುಂದಿನ ಬಾಗಿಲನ್ನು ಬಂದ್ ಮಾಡಿಕೊಂಡಿದ್ದಾರೆ. ಬಾಗಿಲು ತೆಗೆಯುವಂತೆ ಪ್ರಶಾಂತ್ ಕೇಳಿಕೊಂಡರೂ ತೆಗೆಯದೇ ಇದ್ದಾಗ ಸಿಟ್ಟಿಗೆದ್ದ ಪತಿರಾಯ ಎರಡೂ ಬಾಗಿಲುಗಳಿಗೂ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾನೆ. ಇದರಿಂದ ಭಯಗೊಂಡು ಬಿಂದು, ಸಂಧ್ಯಾ ಹಾಗೂ ಆಕೆಯ ಮಕ್ಕಳು ತಪ್ಪಿಸಿಕೊಳ್ಳಲು ಹೊರ ಬಂದಿದ್ದಾರೆ. ಅಲ್ಲೇ ನಿಂತಿದ್ದ ಪ್ರಶಾಂತ ಕುಮಾರ್, ಬಿಂದುವನ್ನು ಹಿಡಿದು ಮನೆಯ ಒಳಗಡೆಗೆ ಎಳೆದುಕೊಂಡು ಹೋಗಿ ಕೊಟ್ಟಿಗೆಯಲ್ಲಿದ್ದ ಕುಡುಗೋಲನ್ನು ತೆಗೆದುಕೊಂಡು ಕತ್ತು ಕೊಯ್ಯಿದ್ದಾನೆ. ಜೀವ ರಕ್ಷಣೆಯಿಂದ ಬಿಂದು ಕುಡುಗೋಲು ಹಿಡಿದುಕೊಂಡಾಗ ಕೈ ಬೆರಳು ಕೊಯ್ದುಕೊಂಡು ಗಾಯಗಳಾಗಿವೆ.
ಇಷ್ಟಕ್ಕೇ ಸುಮ್ಮನಾಗದ ಪ್ರಶಾಂತ್, ಅಡುಗೆ ಮನೆಗೆ ಹೋಗಿ ಗ್ಯಾಸ್ ಪೈಪ್ ಕೊಯ್ದು, ಅದನ್ನು ಆನ್ ಮಾಡಲು ಯತ್ನಿಸಿದ್ದಾನೆ. ಆ ವೇಳೆಗೆ ಕೂಗಾಡುವ ಸದ್ದು ಕೇಳಿ ಗ್ರಾಮಸ್ಥರು ಓಡಿ ಬಂದು ಬಿಂದುವನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಾಂಜಾ ನಶೆಯಲ್ಲಿ ಪ್ರಶಾಂಶ್ ಮಡದಿಯನ್ನ ಕೊಂದೇಬಿಟ್ಟೆ ಅಂತ ಮನೆಯ ಹಾಲ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಗ್ರಾಮಸ್ಥರು ಬೆಂಕಿಯನ್ನು ನಂದಿಸಿ ಮನೆಯ ಒಳಗೆ ಹೋಗಿ ನೋಡಿದಾಗ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಬಿಂದು ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ, ಮೃತ ಪ್ರಶಾಂತ್ಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.