ಬೆಂಗಳೂರು/ಆನೇಕಲ್: ಸಾಮಾನ್ಯವಾಗಿ ಎಷ್ಟೋ ಮಂದಿಗೆ ನಾಯಿ ಎಂದರೆ ಬಹಳ ಇಷ್ಟ. ನಾಯಿಗಿರುವ ನಿಯತ್ತು ಮನುಷ್ಯನಿಗಿಲ್ಲ ಎಂಬ ಮಾತಿದೆ. ಎಷ್ಟೋ ಮಂದಿ ಈ ಮುಗ್ಧ ಪ್ರಾಣಿಗೆ ಮನಸೋತು, ಮನೆಯಲ್ಲಿ ಮಕ್ಕಳಂತೆ ನಾಯಿಯನ್ನು ಬೆಳೆಸಿರುತ್ತಾರೆ. ಆದರೆ ಕ್ಷುಲಕ ಕಾರಣಕ್ಕೆ ವ್ಯಕ್ತಿಯೋರ್ವ ಸಾಕಿದ್ದ ನಾಯಿಯನ್ನೇ (Dog) ಗುಂಡಿಕ್ಕಿ ಕೊಲ್ಲುವ ಮೂಲಕ ವಿಕೃತ ಮೆರೆದಿದ್ದಾನೆ.
ಹೌದು, ತಮಿಳುನಾಡಿನ (Tamilnadu) ಡೆಂಕಣಿಕೋಟೆ ಸಮೀಪದ ಕುತೈಲ್ ಪೈಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಅನಧಿಕೃತವಾಗಿ ಕಂಟ್ರಿ ಬಂದೂಕು ಇಟ್ಟುಕೊಂಡಿದ್ದ 50 ವರ್ಷದ ವೆಂಕಟೇಶ್, ಬಂದೂಕಿನಿಂದ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದನು. ಆದರೆ ಕ್ಷುಲ್ಲಕ ಕಾರಣಕ್ಕೆ ಶಿವಪ್ಪ ಎಂಬುವವರು ಸಾಕಿದ್ದ ನಾಯಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ಇದನ್ನೂ ಓದಿ: ಬೆಳಗಾವಿಯ ಬಹುತೇಕ ದೇಗುಲಗಳಲ್ಲಿ ದೇವರ ದರ್ಶನಕ್ಕೆ ಅವಕಾಶ, ಎಂದಿನಂತೆ ಪೂಜೆ
ಈ ಸಂಬಂಧ ಶಿವಪ್ಪ ಅವರು ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ನಾಯಿಯನ್ನು ಕೊಂದಿದ್ದ ಆರೋಪಿ ವೆಂಕಟೇಶ್ ಅನ್ನು ಪೊಲೀಸರು ಬಂಧಿಸಿ, ಆತನ ಬಳಿ ಇದ್ದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಯಗೊಂಡ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಫೋನ್‍ನಲ್ಲಿ ಚಿತ್ರೀಕರಿಸುತ್ತಿದ್ದ ಜನ