ಭೋಪಾಲ್: ತನ್ನ 13 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಧ್ಯಪ್ರದೇಶದ ಇಂದೋರ್ ನ್ಯಾಯಾಲಯ (Indore Court) ಜೀವಾವಧಿ ಶಿಕ್ಷೆಯೊಂದಿಗೆ 6 ಸಾವಿರ ರೂ. ದಂಡ ವಿಧಿಸಿದೆ.
ಸಂತ್ರಸ್ತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಸರ್ಕಾರದ ಬೊಕ್ಕಸದಿಂದ ನೀಡುವಂತೆ ಶಿಫಾರಸು ಮಾಡಿದೆ. 2018ರ ಪ್ರಕರಣ ಉಲ್ಲೇಖಿಸಿ ವಿಶೇಷ ನ್ಯಾಯಾಧೀಶರಾದ ಸುರೇಖಾ ಮಿಶ್ರಾ (Surekha Mishra) ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರೀಕರಣ- ಬೆಂಗ್ಳೂರಲ್ಲೊಬ್ಬ ಸೈಕೋಪಾತ್ ಪತಿ!
Advertisement
Advertisement
32 ವರ್ಷದ ಆರೋಪಿ 2018ರಲ್ಲಿ ತನ್ನ ಸ್ವಂತ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಿಗಾದ್ರೂ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಪ್ರಕರಣ ಬೆಳಕಿಗೆ ಬಂದ ನಂತರ ಕೇಸ್ ದಾಖಲಿಸಿ ಪೊಲೀಸರು (Indore Police) ಕಾಮುಕ ತಂದೆಯನ್ನು ಬಂಧಿಸಿದ್ದರು. ಈ ಕುರಿತು ಶನಿವಾರ ನಡೆದ ವಿಚಾರಣೆ ಬಳಿಕ ಆರೋಪಿಯನ್ನು ದೋಷಿ ಎಂದು ಗುರುತಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಹೆಂಡ್ತಿ ತಲೆ ಬೋಳಿಸಿದ ಸೈಕೋ ಪತಿ ಅರೆಸ್ಟ್
Advertisement
Advertisement
ವಾದ – ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಸುರೇಖ್ ಮಿಶ್ರಾ, ಯಾವುದೇ ಹೆಣ್ಣು ಅಹಿತಕರ ಘಟನೆಗೆ ತುತ್ತಾದಾಗ ತಂದೆಯ ರಕ್ಷಣೆ ನಿರೀಕ್ಷಿಸುತ್ತಾಳೆ. ಅಂತಹದ್ದರಲ್ಲಿ ತಂದೆಯಿಂದಲೇ ಘೋರ ಅಪರಾಧವಾದರೆ ಯಾರ ರಕ್ಷಣೆ ನಿರೀಕ್ಷಿಸಬೇಕು? ಈ ವ್ಯಕ್ತಿ ತನ್ನ ಮಗಳಿಗೆ ಮಾತ್ರ ದ್ರೋಹ ಮಾಡಿಲ್ಲ. ಬದಲಿಗೆ ಇಡೀ ಸಮಾಜದಲ್ಲಿ ತಂದೆ ಸ್ಥಾನವನ್ನೇ ಅಣುಕಿಸುವಂತೆ ಮಾಡಿದ್ದಾನೆ ಎಂದು ಖಾರವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.