ಚಾಮರಾಜನಗರ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ಕಿರಾತಕ ಅಣ್ಣನೊಬ್ಬ ತಂಗಿಯನ್ನೇ ಕೊಲೆ ಮಾಡಿದ್ದಾನೆ. ಈ ಪ್ರಕರಣ ಜಿಲ್ಲೆಯ ಕೊಳ್ಳೇಗಾಲ (Kollegala) ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ. ಐಮಾನ್ ಬಾನು ಕೊಲೆಗೀಡಾದ ತಂಗಿ. ತಂಗಿಗೆ ಹಲ್ಲೆ ಮಾಡುವ ವೇಳೆ ಅಡ್ಡ ಬಂದಿದ್ದ ಅತ್ತಿಗೆಯ ಮೇಲೂ ಆರೋಪಿ ದಾಳಿ ಮಾಡಿದ್ದಾನೆ.
ಘಟನೆ ಯಾಕಾಯ್ತು…?: ನಿನ್ನೆ ರಾತ್ರಿ ಕೊಲೆ ಪಾತಕಿ ಫರ್ಮಾನ್ ಪಾಷಾ ಊಟ ಮಾಡುವ ವೇಳೆ ತನ್ನ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದ. ಆದರೆ ಮಗು ಜ್ವರದಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಸೌತೆಕಾಯಿ ತಿನ್ನಿಸ ಬೇಡ ಎಂದು ಅತ್ತಿಗೆ ತಸ್ಲೀಮ್ ತಾಜ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಫರ್ಮಾನ್ ತಂಗಿ ಐಮಾನ್ ಭಾನು ಸಹ ಫರ್ಮಾನ್ ಗೆ ನಿಂದಿಸಿದ್ದಳು. ತಂಗಿ ಬೈಯ್ಯುತ್ತಿದ್ದಂತೆ ರೊಚ್ಚಿಗೆದ್ದಿದ್ದ ಆರೋಪಿ ಫರ್ಮಾನ್ ಪಾಷಾ ತಕ್ಷಣ ಅಡುಗೆ ಮನೆಯಲ್ಲಿದ್ದ ಮಾಂಸ ಕತ್ತರಿಸುವ ಕತ್ತಿಯಿಂದ ತಂಗಿ ಐಮಾನ್ ಕತ್ತಿಗೆ ಕೊಚ್ಚಿದ್ದಾನೆ.. ಇದನ್ನೂ ಓದಿ: ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ | ನೀವು ತಪ್ಪಾದ ವಾಹನ ಆಯ್ಕೆ ಮಾಡಿದ್ದೀರಿ – ಉಗ್ರರಿಗೆ ಮಸ್ಕ್ ಟಾಂಗ್
Advertisement
Advertisement
ಈ ವೇಳೆ ಐಮಾನ್ ರಕ್ಷಣೆಗೆ ಬಂದ ಅತ್ತಿಗೆ ಮೇಲು ಫರ್ಮಾನ್ ಅಟ್ಯಾಕ್ ಮಾಡಿದ್ದಾನೆ. ಗಲಾಟೆಯ ಸದ್ದು ಕೇಳಿ ಕೆಳಗೆ ಬಂದ ತಂದೆ ಸೈಯದ್ ಪಾಷಾ ಮೇಲೂ ಹಂತಕ ಹಲ್ಲೆ ನಡೆಸಿದ್ದಾನೆ. ಚೀರಾಟ ಕೂಗಾಟ ಕೇಳಿ ಸ್ಥಳೀಯರು ಬರುತ್ತಿದ್ದಂತೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ತಾನೇ 112ಗೆ ಕರೆ ಮಾಡಿ ಪೊಲೀಸರನ್ನ ಮನೆಗೆ ಕರೆಸಿಕೊಂಡು ಫರ್ಮಾನ್ ಶರಣಾಗಿದ್ದಾನೆ. ಗಂಭೀರ ಗಾಯಗೊಂಡ ಇಬ್ಬರನ್ನೂ ಚಾಮರಾಜನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
Advertisement
Advertisement
ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದು, ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯುವತಿಯರ ಅಂಗಾಂಗ ವಿಡಿಯೋ ಮಾಡ್ತಿದ್ದ ಕಾಮುಕ ಪೊಲೀಸ್ ವಶಕ್ಕೆ