ಭುವನೇಶ್ವರ: ಕರಿ (Curry) ಜೊತೆಗೆ ಅನ್ನ (Cooking Rice) ಮಾಡಿಲ್ಲ ಅಂತಾ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಹೊಡೆದೇ ಕೊಂದಿರುವ ಘಟನೆ ಒಡಿಶಾದ (Odisha) ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಪತಿ ಸನಾತನ ಧಾರುವಾ (40)ನನ್ನ ಬಂಧಿಸಲಾಗಿದೆ. ಮೃತ ಪತ್ನಿ ಪುಷ್ಪಾ (35) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ
ದಂಪತಿಗೆ ಓರ್ವ ಮಗಳು ಹಾಗೂ ಒಬ್ಬ ಮಗನಿದ್ದು, ಮಗಳು ಕುಚಿಂದಾದಲ್ಲಿ ಮನೆಗೆಲಸ ಮಾಡುತ್ತಿದ್ದಾಳೆ. ಮಗ ಘಟನೆ ನಡೆದ ದಿನ ರಾತ್ರಿ ಮಲಗಲು ಸ್ನೇಹಿತನ ಮನೆಗೆ ಹೋಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ನಿಷೇಧ
ಏನಿದು ಘಟನೆ?
ಧಾರುವಾ ಭಾನುವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಆಗ ಪುಷ್ಪಾ ಕರಿಯನ್ನು ಮಾತ್ರ ಮಾಡಿದ್ದು, ಅದರ ಜೊತೆಗೆ ಅನ್ನ ಮಾಡಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಾಗ, ಪತಿ ಪುಷ್ಪಾಳ ಮೇಲೆ ಹಲ್ಲೆ ನಡೆಸಿ ಕೊಂದೇಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗ ಮನೆಗೆ ಹಿಂದಿರುಗಿದಾಗ ತಾಯಿ ಶವವಾಗಿ ಬಿದ್ದಿರುವುದು ಗೊತ್ತಾಗಿದೆ. ನಂತರ ಮಗ ಮಾಹಿತಿ ನೀಡಿದ್ದು, ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.