ಯಾದಗಿರಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಶವ ತೆಗೆದುಕೊಂಡು ಹೋಗಿ ಜಿಲ್ಲಾಸ್ಪತ್ರೆಯಲ್ಲಿ ಬಿಟ್ಟು ಪರಾರಿಯಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಶಹಾಪುರ ತಾಲೂಕಿನ ಖಾನಾಪುರ ಗ್ರಾಮದವನಾದ ವೆಂಕಟೇಶ ಕೊಲೆ ಮಾಡಿ ಪರಾರಿಯಾಗಿರುವ ವ್ಯಕ್ತಿ. ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವಾಗ ಯಾದಗಿರಿಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದರಾದ ಶಾಂತಮ್ಮ ಹಾಗೂ ವೆಂಕಟೇಶ್ ಮಧ್ಯೆ ಪ್ರೇಮವಾಗಿತ್ತು. ವೆಂಕಟೇಶನಿಗೆ ಮೊದಲೇ ವಿವಾಹವಾಗಿ ಮೂರು ಮಕ್ಕಳಿದ್ದರು. ಮೇ ತಿಂಗಳಲ್ಲಿ ಶಾಂತಮ್ಮ ಜೊತೆ ಪ್ರೇಮ ವಿವಾಹವಾಗಿದ್ದನು.
ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು ಹಾಗೂ ಸೋಮವಾರ ರಾತ್ರಿ ಮನೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಪಾಪಿ ಪತಿ ಶಾಂತಮ್ಮರನ್ನ ಕೊಲೆ ಮಾಡಿ ಬೈಕ್ ಮೇಲೆ ಶವ ಹೊತ್ತು ತಂದು ಜಿಲ್ಲಾಸ್ಪೆಯಲ್ಲಿ ಬಿಸಾಕಿ ಹೋಗಿದ್ದಾನೆ. ಶವ ಹೊತ್ತು ತರುವ ದೃಶ್ಯ ಜಿಲ್ಲಾಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ವೆಂಕಟೇಶ ಹಣದಾಸೆಗಾಗಿ ಮಗಳನ್ನು ಕೊಲೆ ಮಾಡಿದ್ದಾನೆಂದು ಶಾಂತಮ್ಮ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.