ಯಾದಗಿರಿ: ಪರ ಪುರುಷನ ಜೊತೆ ಹಾಸಿಗೆ ಹಂಚಿಕೊಳ್ಳಲು ನಿರಾಕರಿಸಿದ ಪತ್ನಿಯನ್ನು ಉಸಿರುಗಟ್ಟಿಸಿ ಪತಿ ಕೊಂದಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಗಂಗನಾಳ ಗ್ರಾಮದಲ್ಲಿ ನಡೆದಿದೆ.
ಶರಣಬಸಮ್ಮ ಪತಿಯಿಂದ ಕೊಲೆಯಾದ ಮಹಿಳೆ. ಭೀಮಣ್ಣ ಕೊಲೆ ಆರೋಪಿ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲದ ಸುಳಿಯಿಂದ ಹೊರಬರಲು ಪತ್ನಿಯ ದೇಹ ಮಾರಾಟಕ್ಕೆ ಪತಿ ಯತ್ನಿಸಿದ್ದ. ಜುಲೈನಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನನ್ನ ಮೇಲಿನ ಆರೋಪ ನಿರಾಧಾರ: ಶಾಸಕ ಮುನಿರತ್ನ ಸ್ಪಷ್ಟನೆ
- Advertisement -
- Advertisement -
ಜು.25 ರಂದು ಪತ್ನಿಯೊಂದಿಗೆ ಗಂಗನಾಳ ಗ್ರಾಮಕ್ಕೆ ಆರೋಪಿ ಪತಿ ಬಂದಿದ್ದ. ಮಾವ-ಅತ್ತೆಯ ಮನೆಯಲ್ಲಿ ಬಾಡೂಟ ಸವೆದು ಜೋಡಿ ಮಲಗಿತ್ತು. ತಡರಾತ್ರಿ 12 ಕ್ಕೆ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ನಾಟಕವಾಡಿದ್ದ. ಅನುಮಾನಗೊಂಡಿದ್ದ ಶಹಾಪೂರ ಪೊಲೀಸರು ಪ್ರಕರಣ ಭೇದಿಸಿದ್ದಾರೆ.
- Advertisement -
ನನಗೆ ಮಕ್ಕಳಾಗಲ್ಲ, ಸ್ನೇಹಿತನ ಜೊತೆಗೆ ಮಲಗು ಎಂದು ಆರೋಪಿ ತನ್ನ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಮಕ್ಕಳಾಗದಿದ್ದರೂ ಪರವಾಗಿಲ್ಲ, ಪರ ಪುರುಷನ ಸಂಗ ಮಾಡಲ್ಲ ಎಂದು ಶರಣಬಸಮ್ಮ ಹೇಳಿದ್ದಳು. ಇದರಿಂದ ಕೆರಳಿದ್ದ ಪತಿ ಭೀಮಣ್ಣ ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಹದಿಹರೆಯದ ವಯಸ್ಸಲ್ಲೇ ಪ್ರೀತಿ, ಪ್ರೇಮ – ಒಂದೇ ಹಗ್ಗಕ್ಕೆ ನೇಣು ಬಿಗಿದು ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ
- Advertisement -
ಬೇರೆಯವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತಿ ಕಿರುಕುಳ ನೀಡುತ್ತಿದ್ದಾನೆಂದು ಶರಣಬಸಮ್ಮ ತನ್ನ ಸಹೋದರಿಗೆ ದುಃಖ ಹೇಳಿಕೊಂಡಿದ್ದಳು. ಮರ್ಯಾದೆ ಪ್ರಶ್ನೆ, ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಸಹೋದರಿ ಬಳಿ ಹೇಳಿಕೊಂಡಿದ್ದಳು. ಶರಣಬಸಮ್ಮ ಕೊಲೆ ಬೆನ್ನಲ್ಲೇ ವಿಚಾರವನ್ನು ಆಕೆಯ ಸಹೋದರಿ ಪೊಲೀಸರಿಗೆ ತಿಳಿಸಿದ್ದಾಳೆ.