ಬೆಂಗಳೂರು: ಹಳೇ ಲವರ್ಸ್ ಮತ್ತೆ ಒಂದಾಗಿ ಮದುವೆಯಾಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಈ ಮಧ್ಯೆ ಮಹಿಳೆ ಮತ್ತೊಬ್ಬ ಯುವಕನೊಂದಿಗೆ ಸಲುಗೆ ಬೆಳೆಸಿ, ಮದುವೆಗೆ ರೆಡಿಯಾದಳು. ಈ ವಿಚಾರ ಹಳೇ ಲವರ್‌ಗೆ ಗೊತ್ತಾಗಿ ಮಹಿಳೆ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಹೆಚ್‌ಎಎಲ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ನಡೆದಿದೆ.
ಉಜ್ಮಾ ಖಾನ್ ಕೊಲೆಯಾದ ಮಹಿಳೆ. ಇಮ್ದಾದ್ ಬಾಷ ಎಂಬಾತನಿಂದ ಕೃತ್ಯ. ಇದನ್ನೂ ಓದಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್ ಕೇಸ್ – ಸಂಜಯ್ ರಾಯ್ ದೋಷಿ
ಉಜ್ಮಾ ಖಾನ್, ಇಮ್ದಾದ್ ಬಾಷಾ ಈ ಹಿಂದೆ ಪ್ರೀತಿಸುತ್ತಿದ್ದರು. ಮನೆಯವರು ವಿರೋಧಿಸಿದ ಹಿನ್ನೆಲೆಯಲ್ಲಿ ಬೇರೆ ಬೇರೆ ಮದುವೆ ಆಗಿದ್ದರು. ಇತ್ತೀಚೆಗೆ ಇಬ್ಬರಿಗೂ ಡಿವೋರ್ಸ್ ಆಗಿ ಮತ್ತೆ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು.
ಹಳೇ ಲರ‍್ಸ್ ಮತ್ತೆ ಮದುವೆಯಾಗಲು ಪ್ಲ್ಯಾನ್ ಮಾಡಿದ್ದರು. ಕೆಲಸದ ನಿಮಿತ್ತ ಇಮ್ದಾದ್ ಬಾಷಾ ಮುಂಬೈಗೆ ಹೋಗಿದ್ದ. ಈ ವೇಳೆ ಕೊಲೆಯಾದ ಉಜ್ಮಾ ಖಾನ್ ಬೇರೊಬ್ಬ ಯುವಕನ ಜೊತೆ ಸಲುಗೆ ಬೆಳೆಸಿ ಮದುವೆಗೆ ಸಿದ್ಧತೆ ನಡೆಸಿದ್ದಳು. ಈ ವಿಚಾರ ತಿಳಿದ ಆರೋಪಿ ಇಮ್ದಾದ್, ಡಿಸೆಂಬರ್ ೩೧ ರಂದು ಮಾತಾಡುವ ನೆಪದಲ್ಲಿ ಕರೆದು ಕೊಲೆ ಮಾಡಿದ್ದ. ಇದನ್ನೂ ಓದಿ: ಮಗನಿಗೆ ಗುರಿಯಿಟ್ಟ ಕೋವಿಗೆ ಪತ್ನಿ ಬಲಿ – ಮನನೊಂದು ಆರೋಪಿ ಪತಿಯೂ ಆತ್ಮಹತ್ಯೆ
ಆದರೆ, ಕೊಲೆ ಬಳಿಕ ನಾಟಕ ಮಾಡಿದ್ದ ಇಮ್ದಾದ್ ಬಾಷಾ, ‘ನನ್ನ ಮೊದಲ ಪತ್ನಿ ಎರಡನೇ ಮದುವೆಗೆ ಒಪ್ಪುತ್ತಿಲ್ಲ. ಹಾಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಸಂಬಂಧಿಕರಿಗೆ ಮೆಸೇಜ್ ಮಾಡಿದ್ದ. ನಂತರ ತಾನು ಕೂಡ ವಿಷ ಸೇವಿಸಿದಂತೆ ನಾಟಕ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಮೆಸೇಜ್ ಮಾಡೋ 10 ಗಂಟೆ ಮೊದಲೇ ಮಹಿಳೆ ಸಾವನ್ನಪ್ಪಿರೋದು ಗೊತ್ತಾಗಿ ಪೊಲೀಸರು ಆರೋಪಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಸತ್ಯ ಬಾಯಿಬಿಟ್ಟಿದ್ದಾನೆ.