ಲಕ್ನೋ: ಮದುವೆಯಾದ (Marriage) ನಂತರವೂ ಅಕ್ರಮ ಸಂಬಂಧ ಹೊಂದಿದ್ದ ತನ್ನ ಮಾಜಿ ಪ್ರೇಯಸಿಯನ್ನ (Lovers) ಕೊಂದು 6 ತುಂಡಾಗಿ ಕತ್ತರಿಸಿ ಅರೆಬೆತ್ತಲೆ ಸ್ಥಿತಿಯಲ್ಲಿ ದೇಹವನ್ನು ಬಾವಿಗೆ ಎಸೆದು ವಿಕೃತಿ ಮೆರೆದಿದ್ದ ಹಂತಕನನ್ನು ಉತ್ತರಪ್ರದೇಶದ ಪೊಲೀಸರು (UttarPradesh Police) ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
The prime accused Prince Yadav has been arrested during the Police investigation. He sustained a bullet injury in his right leg. An illegal weapon was recovered from him: Anurag Arya, SP, Azamgarh pic.twitter.com/BWFf0tG0Hw
— ANI UP/Uttarakhand (@ANINewsUP) November 21, 2022
Advertisement
ದೆಹಲಿಯಲ್ಲಿ (Newdelhi) ಶ್ರದ್ಧಾ (Shraddha Walker) ಹತ್ಯೆ ಬಳಿಕ ಇಂತಹದ್ದೇ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಉತ್ತರಪ್ರದೇಶದ ಕೊಚ್ಚಿಯಲ್ಲಿ ಮಹಿಳೆಯ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರೋಪಿಯನ್ನು (Accused) ಬಂಧಿಸಲಾಗಿದೆ. ಅಲ್ಲದೇ ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ಯುತ್ತಿದ್ದ ವೇಳೆ ತಪ್ಪಿಸಿಕೊಳ್ಳಲು ಆರೋಪಿ ಪ್ರಿನ್ಸ್ ಯಾದವ್‌ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ತಂದೆಯನ್ನೇ ಕೊಂದು 6 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದ ಹೆಂಡತಿ, ಮಗ
Advertisement
Advertisement
ಆರೋಪಿ ದೇಸಿ ಪಿಸ್ತೂಲ್ ಅನ್ನು ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದಾಗಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಒಟ್ಟಿಗೆ 48 ವಾಹನಗಳು ಜಖಂ
Advertisement
ಇದೇ ತಿಂಗಳ ನವೆಂಬರ್ 15ರಂದು ಸ್ಥಳೀಯರು ಗ್ರಾಮದ ಹೊರಗಿನ ಬಾವಿಯೊಳಗೆ ಶವವನ್ನು ಪತ್ತೆ ಮಾಡಿದ್ದರು. ಆರಾಧನಾ ಎಂದು ಗುರುತಿಸಲಾದ ಮಹಿಳೆಯ ದೇಹವು ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಎಸ್ಪಿ ಅನುರಾಗ್ ಆರ್ಯ ತಿಳಿಸಿದ್ದರು.
ಪ್ರಿನ್ಸ್ ಯಾದವ್ ಇಶಾಕ್ ಪುರ್ ಗ್ರಾಮದಲ್ಲಿ ವಾಸಿಸುತ್ತಿದ್ದ ತನ್ನ ಗೆಳತಿ ಆರಾಧನಾ ಬೇರೊಬ್ಬನೊಂದಿಗೆ ಮದುವೆಯಾಗಿದ್ದರಿಂದಾಗಿ ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದನು. ಅದಕ್ಕಾಗಿ ಸೋದರ ಸಂಬಂಧಿ ಸರ್ವೇಶ್ ಮತ್ತು ಕುಟುಂಬದ ಇತರರ ಸಹಾಯ ಪಡೆದಿದ್ದನು. ಆದ ನಂತರವೂ ಈತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ತಿಂಗಳ ನವೆಂಬರ್ 9 ರಂದು ಯಾದವ್ ಆರಾಧನಾಳನ್ನು ತನ್ನ ಬೈಕ್‌ನಲ್ಲಿ ದೇವಸ್ಥಾನಕ್ಕೆ ಕರೆದೊಯ್ದಿದ್ದ ಅಲ್ಲಿಗೆ ತಲುಪಿದಾಗ ಸರ್ವೇಶ್ ಸಹಾಯದಿಂದ ಕಬ್ಬಿನ ಗದ್ದೆಯಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಇಬ್ಬರೂ ಆಕೆಯ ದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬಾವಿಗೆ ಎಸೆದಿದ್ದಾರೆ. ದೇಹವನ್ನು ಬಾವಿಗೆ ಎಸೆದು, ತಲೆಯನ್ನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕೊಳಕ್ಕೆ ಬಿಸಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಹರಿತವಾದ ಆಯುಧಗಳು ಹಾಗೂ ಒಂದು ದೇಶಿ ನಿರ್ಮಿತ ಪಿಸ್ತೂಲ್ ಹಾಗೂ ಕಾಟ್ರಿಜ್ಟ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಿನ್ಸ್ ಯಾದವ್ ನನ್ನು ಬಂಧಿಸಿದ್ದಾರೆ. ಆದರೆ ಸರ್ವೇಶ್, ಪ್ರಮೀಳಾ ಯಾದವ್, ಸುಮನ್, ರಾಜಾರಾಂ, ಕಲಾವತಿ, ಮಂಜು, ಶೀಲಾ ಇನ್ನೂ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ನಡೆಸಿದ್ದಾರೆ.