ಹೈದರಾಬಾದ್: ಬಹುತೇಕ ಮನೆಗಳಲ್ಲಿ ಸಹಜವಾಗಿ ಬೆಕ್ಕು ಇದ್ದೇ ಇರುತ್ತದೆ. ಕೆಲವರಿಗೆ ಬೆಕ್ಕಿನ ಕೂಗು ಅಪ್ಯಾಯಮಾನವೆನಿಸಿದ್ದರೂ ಇನ್ನೂ ಕೆಲವರಿಗೆ ಸದಾ ಕಿರಿ-ಕಿರಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಕ್ಕನ್ನು ಮನೆಯಿಂದ ಆಚೆಗೆ ಬಿಸಾಡಿದ ಉದಾಹರಣೆಗಳೂ ಇವೆ. ಆದರೆ ಇಲ್ಲೊಬ್ಬ ಬೆಕ್ಕಿನ ಕೂಗಿನಿಂದ ತನ್ನ ನಿದ್ರೆಗೆ ಭಂಗವಾಗುತ್ತದೆ ಎಂದು ಬೆಕ್ಕಿನ ಮಾಲೀಕನನ್ನೇ ಪೆಟ್ರೋಲ್ ಸುರಿದು ಕೊಂದಿದ್ದಾನೆ.
Advertisement
ಹೌದು. ಬೆಕ್ಕಿನ ಕೂಗಿನಿಂದ ಸಿಟ್ಟಾದ ವ್ಯಕ್ತಿ ಹಾಗೂ ಬಾಲಕ ಸೇರಿ ಸಾಕು ಪ್ರಾಣಿ ಬೆಕ್ಕಿನ ಮಾಲೀಕನನ್ನೇ ಬೆಂಕಿಹಚ್ಚಿ ಸುಟ್ಟು ಹಾಕಿರುವ ವಿಲಕ್ಷಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಸಂತ್ರಸ್ತನ ಸ್ನೇಹಿತ ಶನಿವಾರ ಹೈದರಾಬಾದ್ ನಗರದ ಬಂಜಾರ ಪೊಲೀಸರಿಗೆ ದೂರು ನೀಡಿದ ಬಳಿಕ ಇದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಷ್ಟ್ರಗೀತೆಗೆ ಅಪಮಾನ : ಬರಗೂರು ವಿರುದ್ಧ ಬಿಜೆಪಿಯಿಂದ ದೂರು
Advertisement
ಇಲ್ಲಿನ ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದಲ್ಲಿ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) ಮತ್ತು ಇನ್ನೋರ್ವ 17 ವರ್ಷದ ಬಾಲಕ ವಾಸಿಸುತ್ತಿದ್ದರು.
Advertisement
Advertisement
ಇಲ್ಲಿಗೆ 20 ವರ್ಷದ ಎಜಾಜ್ ಹುಸೇನ್ ಹಾಗೂ 20 ವರ್ಷದ ಅಸ್ಸಾಂ ಮೂಲದ ಬ್ರಾನ್ ಸ್ಟಿಲಿಂಗ್ ಸಹ ಅದೇ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅಂದೊಂದು ರಾತ್ರಿ ಎಜಾಜ್ ಮತ್ತು ಬ್ರಾನ್ ಇಬ್ಬರೂ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ತಿರುಗಾಡುತ್ತಿದ್ದ ಬೆಕ್ಕನ್ನು ಕಂಡು ಮನೆಗೆ ತಂದಿದ್ದರು. ಇದನ್ನೂ ಓದಿ: ಬಲವಂತವಾಗಿ ದನದ ಮಾಂಸ ತಿನ್ನಿಸಿದ ಮುಸ್ಲಿಂ ಪತ್ನಿ, ಆಕೆಯ ಸಹೋದರ- ವ್ಯಕ್ತಿ ಆತ್ಮಹತ್ಯೆ
ಈ ಬೆಕ್ಕನ್ನು ಮನೆಗೆ ತಂದಾಗ ನಿರಂತರವಾಗಿ ಕೂಗುತ್ತಿದ್ದರಿಂದ ಹರೀಶ್ವರ್ ರೆಡ್ಡಿ ನಿದ್ರೆಗೆ ಭಂಗ ಬಂದಿತ್ತು. ಇದರಿಂದ ಹರೀಶ್ವರ್ ತೀವ್ರ ಸಿಟ್ಟಿಗೆದ್ದಿದ್ದರು, ಹರೀಶ್ವರ್ ಜೊತೆಗಿದ್ದ ಬಾಲಕನಿಗೂ ಬೆಕ್ಕಿನ ಕೂಗು ಸಿಟ್ಟು ತರಿಸಿತ್ತು. ಬೆಕ್ಕು ಪದೇ-ಪದೇ ಕೂಗುತ್ತಿದ್ದರಿಂದ ಅಪ್ರಾಪ್ತನಿಗೂ ಕೋಪ ನೆತ್ತಿಗೇರಿತ್ತು. ಮಲಗಿದ್ದ ಇಬ್ಬರೂ ಎದ್ದು ಬೆಕ್ಕನ್ನು ತಂದಿದ್ದ ಎಜಾಜ್ ಎಂಬಾತನ ಮನೆಗೆ ಹೋಗಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಏಜಾಜ್‌ಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿತ್ತು. ತಕ್ಷಣವೇ ಆತನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು.
ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಹರೀಶ್ವರ್ ರೆಡ್ಡಿ, ಎಜಾಜ್ ಆಕಸ್ಮಿಕವಾಗಿ ಬೆಂಕಿ ಹೊತ್ತಿಸಿಕೊಂಡಿದ್ದಾರೆ ಸುಳ್ಳು ಮಾಹಿತಿ ನೀಡಿದ್ದರು. ನಂತರ ಮೃತನ ಸ್ನೇಹಿತ ಬ್ರಾನ್ ನೀಡಿದ ದೂರಿನ ಮೇರೆಗೆ ಪೊಲೀಸರಿಗೆ ಘಟನೆ ತಿಳಿದುಬಂದಿದೆ. ಘಟನೆ ಸಂಬಂಧ ಹರೀಶ್ವರ್ ರೆಡ್ಡಿ ಹಾಗೂ ಆತನ ಜೊತೆಗಿದ್ದ ಅಪ್ರಾಪ್ತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.