ಮೈಸೂರು: ಸ್ಕೂಟರ್ ಮಾರಿದರೂ ದಂಡದ ಮೊತ್ತ ಸಿಗುವುದಿಲ್ಲ. ಹೀಗಾಗಿ ನೀವೇ ಅದನ್ನು ಇಟ್ಟುಕೊಳ್ಳಿ ಅಂತಾ ಸವಾರನೊಬ್ಬ ತಮ್ಮ ಸ್ಕೂಟರನ್ನು ಮೈಸೂರು ಸಂಚಾರ ಪೊಲೀಸರಿಗೆ ಕೊಟ್ಟು ಹೋಗಿದ್ದಾನೆ.
ಮಧುಕುಮಾರ್ ಸ್ಕೂಟರ್ ಮಾಲೀಕ. ಎನ್.ಆರ್.ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ತಪಾಸಣೆ ಮಾಡುತ್ತಿದ್ದರು. ಆಗ ಕೆಎ 09 ಎಚ್.ಡಿ. 4732 ನಂಬರ್ ಆಕ್ಟೀವಾ ಸ್ಕೂಟರನ್ನು ತಪಾಸಣೆಗೆ ನಿಲ್ಲಿಸಿದ್ದರು. ಈ ಹಿಂದೆ ಸ್ಕೂಟರ್ ಮೇಲೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಒಟ್ಟು 635 ಪ್ರಕರಣಗಳು ದಾಖಲಾಗಿದ್ದವು. ಅದರ ಒಟ್ಟು ದಂಡ ಮೊತ್ತ 63,500 ರೂ. ಆಗಿದೆ ಎನ್ನುವುದು ಸಂಚಾರ ಪೊಲೀಸರಿಗೆ ಗಮನಕ್ಕೆ ಬಂದಿದೆ.
Advertisement
ದಂಡದ ಮೊತ್ತದ 63,500 ರೂ. ಪಾವತಿ ಮಾಡಬೇಕು ಎಂದು ಪೊಲೀಸರು ತಿಳಿಯುತ್ತಿದ್ದಂತೆ ಮಧುಕುಮಾರ್ ಗೆ ಶಾಕ್ ಆಗಿತ್ತು. ಸ್ಕೂಟರ್ ಮಾರಿದರೂ ದಂಡ ಮೊತ್ತವನ್ನು ಸೇರಿಸಲು ಸಾಧ್ಯವಿಲ್ಲವೆಂದು ಅರಿತ ಮಧುಕುಮಾರ್ ದಂಡ ಪಾವತಿಗೆ ಮುಂದಾಗಲಿಲ್ಲ. ಸ್ಕೂಟರನ್ನು ನೀವೇ ಇಟ್ಟುಕೊಳ್ಳಿ ಅಂತಾ ಪೊಲೀಸರಿಗೆ ಒಪ್ಪಿಸಿ ಹೋಗಿದ್ದಾನೆ.