ಲಕ್ನೋ: 60 ವರ್ಷದ ವ್ಯಕ್ತಿ ಸಾಧು ವೇಷ ತೊಟ್ಟು, ಮಾದಕ ವಸ್ತುವನ್ನು ಮಾರುತ್ತಿದ್ದು, ಆತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯ ಬಳಿಯಿದ್ದ 6ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ಘನ್ ಶ್ಯಾಮ್ ಶುಕ್ಲಾ(60) ತನ್ನನ್ನು ಸಾಧು ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಗರದಲ್ಲಿ ಡ್ರಗ್ಸ್ ಸರಬರಾಜು ಮಾಡುವ ಗ್ಯಾಂಗ್ನ ಭಾಗವಾಗಿದ್ದ ಆತನನ್ನು ಕೃಷ್ಣ ನಗರದಲ್ಲಿ ಲಕ್ನೋ ಪೊಲೀಸರು ಬಂಧಿಸಿದ್ದಾರೆ.
Advertisement
ಶುಕ್ಲಾ ಸಾಧು ವೇಷದಲ್ಲಿದ್ದು, ಕ್ಯಾಬ್ಗಳಲ್ಲಿ ನಗರವನ್ನು ಸುತ್ತುತ್ತಿದ್ದ. ಭಾರತ-ನೇಪಾಳ ಗಡಿಯಲ್ಲಿರುವ ಡ್ರಗ್ಸ್ ಪೆಡ್ಲರ್ಗಳಿಂದ ಗಾಂಜಾವನ್ನು ಸಂಗ್ರಹಿಸಿ, ಸ್ಥಳೀಯವಾಗಿ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 40 ಕತ್ತೆಗಳು ನಾಪತ್ತೆ- ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು
Advertisement
Advertisement
ಆರೋಪಿ ಶುಕ್ಲಾ ಜೊತೆಗೂಡಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಅವದೇಶ್ ಮಿಶ್ರಾ ಅಲಿಯಾಸ್ ಸೋನು ತಲೆಮರೆಸಿಕೊಂಡಿದ್ದಾನೆ. ಅವರಿಬ್ಬರು ಒಟ್ಟಿಗೆ ಕ್ಯಾಬ್ಗಳನ್ನು ಬಾಡಿಗೆ ತೆಗೆದುಕೊಂಡು, ನಗರವನ್ನು ಸುತ್ತಿ ಮಾದಕ ವಸ್ತುವನ್ನು ರವಾನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೈನ್ ಮೇಲಿನ ಐಟಿ ದಾಳಿ ಹಿಂದೆ ಬಿಜೆಪಿ ಕೈವಾಡ ಇದೆ: ಅಖಿಲೇಶ್ ಯಾದವ್
Advertisement
ಇದೀಗ ಆರೋಪಿ ಘನ್ ಶ್ಯಾಮ್ ಶುಕ್ಲಾನನ್ನು ಬಂಧಿಸಲಾಗಿದ್ದು, ಆತನ ಸಹಚರ ಸೋನು ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.