ಕಾಸರಗೋಡು: ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬರು ಕೇರಳದ ಕಾಸರಗೋಡಿನ ರಸ್ತೆ ಬದಿಯಲ್ಲಿ ಸೋಮವಾರ ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹರೀಶ್ ನಾಯ್ಕ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.
Advertisement
Advertisement
ಏನಿದು ಘಟನೆ?
ಇಂದು ಸಂಜೆ ನಾಯ್ಮಾರ್ ಮೂಲ ಎಂಬಲ್ಲಿ ಕಬ್ಬಿನ ಜ್ಯೂಸ್ ಮಾರಾಟ ಮಾಡುತ್ತಿದ್ದ ಜಾಗಕ್ಕೆ ಹರೀಶ್ ನಾಯ್ಕ್ ಆಗಮಿಸಿದ್ದಾರೆ. ಈ ವೇಳೆ ಮಾಲೀಕನಲ್ಲಿ ಚಾಕು ಕೇಳಿದ್ದಾರೆ. ಬಳಿಕ ಆ ಚಾಕುವಿನಿಂದ ತನ್ನ ಕತ್ತನ್ನು ಕೊಯ್ದುಕೊಂಡಿದ್ದಾರೆ. ಮಾಲೀಕ ಈ ದೃಶ್ಯವನ್ನು ನೋಡಿ ಅಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಈ ದೃಶ್ಯವನ್ನು ನೋಡಿ ಗಾಬರಿಗೊಂಡು ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಹರೀಶ್ ನಾಯ್ಕ್ ಮೃತಪಟ್ಟಿದ್ದರು.
Advertisement
ವಿಷಯ ತಿಳಿದು ಸ್ಥಳಕ್ಕೆ ಬಂದು ಮೃತದೇಹವನ್ನು ಪರಿಶೀಲಿಸಿದಾಗ ಶರ್ಟ್ ಕಿಸೆಯಲ್ಲಿ ಒಂದು ಐಡಿ ಕಾರ್ಡ್ ಸಿಕ್ಕಿದೆ. ಈ ಕಾರ್ಡ್ ನಲ್ಲಿ ಹರೀಶ್ ನಾಯ್ಕ್ ಹೆಂಡತಿ ಜೊತೆಗಿನ ಫೋಟೋ ಮತ್ತು ಚಿಕ್ಕಮಗಳೂರಿನ ವಿಳಾಸ ಸಿಕ್ಕಿದೆ. ಈ ಮಾಹಿತಿಯನ್ನು ಇಟ್ಟುಕೊಂಡು ಕಾಸರಗೋಡು ಪೊಲೀಸರು ಚಿಕ್ಕಮಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸದ್ಯ ಚಿಕ್ಕಮಗಳೂರು ಪೊಲೀಸರು ವಿಳಾಸವನ್ನು ಹುಡುಕುತ್ತಿದ್ದಾರೆ.
Advertisement
ಫೋಟೋ ಕೃಪೆ: ಕಾಸರಗೋಡುವಾರ್ತಾ, ಮನೋರಮಾ ಆನ್ಲೈನ್