ಕಲಬುರಗಿ: ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಕಡಣಿ ಗ್ರಾಮದ ಹೊರವಲಯದ ಹಳ್ಳಿದಲ್ಲಿ ನಡೆದಿದೆ.
ಸಿದ್ದು ಕೆರಮಗಿ, ಮಳೆ ಅನಾಹುತಕ್ಕೆ ಬಲಿಯಾದ ವ್ಯಕ್ತಿ. ಒಂದು ಕಿಲೋ ಮೀಟರ್‌ನಷ್ಟು ದೂರದಲ್ಲಿ ಮುಳ್ಳು ಕಂಟಿಯಲ್ಲಿ ಸಿದ್ದು ಕೆರಮಗಿ ದೇಹ ಸಿಲುಕಿದ್ದು, ಇಂದು ಪತ್ತೆಯಾಗಿದೆ. ಈ ಹಿನ್ನೆಲೆ ತಕ್ಷಣವೇ ಪರಿಹಾರವಾಗಿ 5 ಲಕ್ಷ ರೂ. ವಿತರಣೆ ಮಾಡಲಾಯಿತು. ಇದನ್ನೂ ಓದಿ: ದ್ರೌಪದಿ ಮುರ್ಮು ಗೆಲುವಿಗೆ ಪುಟಿನ್ ಅಭಿನಂದನೆ ಸಂದೇಶ
Advertisement
ನಡೆದಿದ್ದೇನು?
ಸಿದ್ದು ಕೆರಮಗಿ, ಕಡಣಿ ಗ್ರಾಮ ಪಂಚಾಯತಿ ಸದಸ್ಯರ ಪುತ್ರ. ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ್ದಿದ್ದು, ಹೊಲದಲ್ಲಿ ಕಾಯಿಪಲ್ಯ ತರಲು ಹೋಗಿದ್ದರು. ಈ ವೇಳೆ ಟಂ ಟಂ ವಾಹನ ಸಿಕ್ಕಿಬಿದ್ದಿರುವುದನ್ನು ಹೊರ ತೆಗೆಯಲು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಜೋರಾದ ಮಳೆಗೆ ಹಳ್ಳ ತುಂಬಿತ್ತು.
Advertisement
Advertisement
ಹೀಗಾಗಿ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ನೀರಲ್ಲಿ ಹರಿದು ಹೋಯಿತು. ಚಾಲಕ ಮಾತ್ರ ಕಂಟಿಯೊಂದನ್ನು ಹಿಡಿದು ಸ್ವಲ್ಪ ಸಮಯದ ನಂತರ ಹೊರ ಬಂದ. ಆದರೆ ಟ್ರ್ಯಾಕ್ಟರ್‌ನಲ್ಲಿದ್ದ ಸಿದ್ದು ನೀರಲ್ಲಿ ಹರಿದುಕೊಂಡು ಹೋಗಿದ್ದರು. ಇದನ್ನೂ ಓದಿ: ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್: ಎಂ.ಸಿ.ಸುಧಾಕರ್‌ಗೆ ಸಚಿವ ಸುಧಾಕರ್ ವಾರ್ನಿಂಗ್
Advertisement
ಇವರ ಪತ್ತೆಗಾಗಿ ರಾತ್ರಿಯಿಡಿ ಅಗ್ನಿಶಾಮಕ ದಳ ಹಾಗೂ ಇತರರು ಶೋಧ ನಡೆಸಿದರೂ ಸಿಗಲಿಲ್ಲ. ಇಂದು ಬೆಳಗ್ಗೆ ಶವ ಪತ್ತೆಯಾಗಿದೆ.