ಬೆಂಗಳೂರು: ಪಾದಚಾರಿಗೆ ಡಿಕ್ಕಿ ಹೊಡೆದು ಲಾರಿ ಸಮೇತ ಚಾಲಕ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು-ಹೊಸೂರು (Bengaluru) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಒರಿಸ್ಸಾ ಮೂಲದ ನಿರಂಜನ್ ಹಿಟ್ ಆ್ಯಂಡ್ ರನ್‌ಗೆ ಬಲಿಯಾದ ದುರ್ದೈವಿ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರ ಬಳಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಜಾತಿಗಣತಿ ಸಂಘರ್ಷ – ಕಾಂತರಾಜು ವರದಿಗೆ ವೀರಶೈವರಿಂದಲೂ ತೀವ್ರ ವಿರೋಧ
ನಿರಂಜನ್ ಕುಟುಂಬ ಚಂದಾಪುರದಲ್ಲಿ ವಾಸವಿದೆ. ಹಳೆ ಚಂದಾಪುರಿಂದ ನಡೆದು ಬರುವಾಗ ನಿರಂಜನ್‌ಗೆ ಈಚರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತ ನಡೆಸಿ ವಾಹನ ನಿಲ್ಲಿಸದೇ ಚಾಲಕ ಎಸ್ಕೇಪ್ ಆಗಿದ್ದಾರೆ. ಭೀಕರ ಅಪಘಾತದಿಂದ ನಿರಂಜನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೃತದೇಹವನ್ನು ರವಾನೆ ಮಾಡಿ ಟ್ರಾಫಿಕ್ ಕ್ಲಿಯರ್ ಮಾಡಲಾಯಿತು. ಇದನ್ನೂ ಓದಿ: 1 ಕಿ.ಮೀಗೆ 450 ಕೋಟಿ ರೂ. – ಡಿಕೆಶಿಯ ಕನಸಿನ ಸುರಂಗ ಯೋಜನೆ ಬೆಂಗಳೂರಿಗೆ ಬೇಕಾ? ಬೇಡ್ವಾ?
ಅಪಘಾತ ನಡೆಸಿ ಪರಾರಿಯಾಗಿರುವ ವಾಹನ ಹಾಗೂ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.