– ಬಸವಣ್ಣನ ಫೋಟೊ ತೆಗೆದು ಏಸುಕ್ರಿಸ್ತನ ಫೋಟೊ ಹಾಕುವಂತೆ ರಂಪಾಟ
ಯಾದಗಿರಿ: ಬಸ್ ನಿಲ್ದಾಣದಲ್ಲಿ ಬಸವಣ್ಣನ ಪೋಟೊ ತೆಗೆದು ಕ್ರೈಸ್ತನ ಪೋಟೋ ಹಾಕುವಂತೆ ಕ್ರಿಶ್ಚಿಯನ್ ಅನುಯಾಯಿ ಒಬ್ಬ ಕಿರಿಕ್ ಮಾಡಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.
ವಿಶ್ವಗುರು ಬಸವಣ್ಣನಿಗೆ ಅವಹೇಳನಕಾರಿಯಾಗಿ ಮಾತನಾಡಿದ ಅನಾಮಧೇಯ ವ್ಯಕ್ತಿ, ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಮಾಡಿದ್ದಾನೆ. ಕ್ರೈಸ್ತ ಧರ್ಮದವರಿಗೆ ಅನ್ಯಾಯವಾಗಿದೆ. ಪಾರ್ಸಿಯಾಲಿಟಿ ಮಾಡ್ತೀರಿ ನೀವು. ಬಸವಣ್ಣನ ಪೋಟೊ ಯಾಕೆ ಹಾಕಿದ್ದೀರಾ? ಎಲ್ಲಾ ಬಸ್‌ಗಳಲ್ಲಿ ಜೀಸಸ್ ಪೋಟೊ ಹಾಕಬೇಕು ಎಂದು ಮೊಂಡಾಟ ಮಾಡಿದ್ದಾನೆ. ಇದನ್ನೂ ಓದಿ: ಮಂಡ್ಯ | ಅಕ್ರಮ ಗರ್ಭಪಾತದ ನಂತರ ಮಹಿಳೆ ಸಾವು
ಬಸವಕಲ್ಯಾಣ ತೆಗೆದು ಎಲ್ಲಾ ಬಸ್ಸುಗಳ ಮೇಲೆ ಕ್ರೈಸ್ತ ಕಲ್ಯಾಣ ಅಂತಾ ಮಾಡುತ್ತೇನೆ. ಕ್ರೈಸ್ತ ಮೊದಲು ಬಂದಿದ್ದಾನೆ. ಬಸವಣ್ಣ ಆಮೇಲೆ ಬಂದಿದ್ದಾನೆ ಎಂದು ಸಿಬ್ಬಂದಿ ಮೇಲೆ ರೇಗಾಡಿದ್ದಾನೆ. 12ನೇ ಶತಮಾನದಲ್ಲಿ ಬಸವಣ್ಣ ಬಂದಿದ್ದಾನೆ. ಅದಕ್ಕಿಂತಲೂ ಮುಂಚಿತವಾಗಿ ಕ್ರಿಸ್ತ ಶಕದಲ್ಲಿ ಕ್ರೈಸ್ತ ಇದ್ದ ಎಂದು ರಂಪಾಟ ನಡೆಸಿದ್ದಾನೆ.
ಬಸ್ ನಿಲ್ದಾಣದಲ್ಲೇ ರಂಪಾಟ ಮಾಡುವ ವೇಳೆ ಸಾರ್ವಜನಿಕರು ವೀಡಿಯೋ ಮಾಡಿಕೊಂಡಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ. ಅನಾಮಧೇಯ ವ್ಯಕ್ತಿಯ ವಿರುದ್ಧ ಕ್ರಮಕ್ಕಾಗಿ ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಸಲೂನ್‌ಗೆ ಹೋಗಿ ಕ್ಲೀನ್ ಆಗಿ ಬಂದಿದ್ದಾರೆ, ಇದಕ್ಕೆ ಅಮಿತ್ ಶಾ ಡೈರೆಕ್ಟರ್: ಪ್ರಿಯಾಂಕ್ ಖರ್ಗೆ ವಾಗ್ದಾಳಿ