– ಈ ಜನ್ಮದಲ್ಲಿ ಸಾಲ ತೀರಿಸಲು ಆಗಲ್ಲ ಅಂತ ಡೆತ್‌ನೋಟ್‌ನಲ್ಲಿ ಉಲ್ಲೇಖ
ಬೆಂಗಳೂರು: 2 ಕೋಟಿ ಸಾಲ ತೀರಿಸಲಾಗದೇ ವ್ಯಕ್ತಿಯೊಬ್ಬ ನಗರದ ಮಂತ್ರಿ ಮಾಲ್ ಒಳಗೆ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Advertisement
ಉಲ್ಲಾಳ ಉಪನಗರದ ನಿವಾಸಿ ಮಂಜುನಾಥ್ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿ 2 ಕೋಟಿ ಸಾಲ ಮಾಡಿಕೊಂಡಿದ್ದರು. ಇಂದು ರಾತ್ರಿ 9 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಮಂಜುನಾಥ್ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದರು. ಸಾಲ ತೀರಿಸಲಾಗದೆ ಡೆತ್‌ನೋಟ್ ಬರೆದಿತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ‘2 ಕೋಟಿ ಸಾಲ ಮಾಡಿಕೊಂಡಿದ್ದೇನೆ. ಅದನ್ನ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
Advertisement
ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನ ಜೀವನದಲ್ಲಿ ನೊಂದಿದ್ದೀನಿ. ಸಾಲ ತೀರಿಸಲು ತುಂಬಾ ಪ್ರಯತ್ನ ಮಾಡಿದೆ. ಸದ್ಯದ ಪರಿಸ್ಥಿಯಲ್ಲಿ ಸಾಲ ತೀರಿಸುವುದಕ್ಕೆ ಆಗ್ತಾ ಇಲ್ಲ. ಸಾಲ ಕೊಟ್ಟವರು ಎಲ್ಲ ಕ್ಷಮಿಸಿ ಎಂದು ಬರೆದಿಟ್ಟಿದ್ದಾರೆ. ಡೆತ್‌ನೋಟ್‌ನಲ್ಲಿ ಮನೆಯವರ ನಂಬರ್‌ಗಳನ್ನೆಲ್ಲ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.