ಉಡುಪಿ: ಚಾಲಕರಿಬ್ಬರು ಬಿರಿಯಾನಿಯ ಲೆಗ್ ಪೀಸ್‍ಗಾಗಿ ಗಲಾಟೆ ಮಾಡಿಕೊಂಡು, ಕೊನೆಗೆ ಕಿವಿ ಕಚ್ಚಿ ತಿನ್ನುವ ಮೂಲಕ ಜಗಳ ಕೊನೆಗೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಚಾಲಕರಾದ ಮಧು ಮತ್ತು ಸುರೇಶ್ ಲೆಗ್ ಪೀಸ್‍ಗಾಗಿ ಜಗಳವಾಡಿದವರು. ಶ್ರೀಕೃಷ್ಣ ಮಠದ ಪಾರ್ಕಿಂಗ್ ಮೈದಾನದಲ್ಲಿ ಕುಡಿದ ಅಮಲಿನಲ್ಲಿದ್ದ ಇಬ್ಬರು ಕಿವಿ, ಮುಖ, ಕೈಗೆ ಕಚ್ಚಿಕೊಂಡು ವಿಲಕ್ಷಣವಾಗಿ ವರ್ತಿಸಿದ್ದಾರೆ.
Advertisement
ನಡೆದಿದ್ದು ಏನು?
ಸುರೇಶ ಹಾಗೂ ಮಧು ಒಂದೇ ತಟ್ಟೆಯಲ್ಲಿ ತಿಂದು, ಉಂಡು-ಕುಡಿದ ಸ್ನೇಹಿತರು. ಇಂದು ಉಡುಪಿಯ ಕೃಷ್ಣಮಠಕ್ಕೆ ಉತ್ತರ ಕರ್ನಾಟಕದಿಂದ ಪ್ರವಾಸಿಗರನ್ನು ಕರೆತಂದು ತಂದಿದ್ದರು. ಕುಡಿದ ಅಮಲಿನಲ್ಲಿ ಮಠದ ಪಾರ್ಕಿಂಗ್ ಜಾಗದಲ್ಲಿದ್ದ ಹೋಟೆಲ್‍ನಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಇಬ್ಬರೂ ಬಿರಿಯಾನಿಯ ಲೆಗ್ ಪೀಸ್ ಗಾಗಿ ನಡೆದ ಜಗಳ ಪ್ರಾರಂಭಿಸಿದ್ದು, ಪರಸ್ಪರ ಹೊಡೆದಾಡಿ ಕಿವಿ, ಮುಖ, ಕೈಗೆ ಕಚ್ಚಿಕೊಂಡ ವಿಲಕ್ಷಣ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಜಗಳದಲ್ಲಿ ಚಾಲಕ ಮಧು ಕಿವಿಯನ್ನು ಮತ್ತೊಬ್ಬ ಚಾಲಕ ಸುರೇಶ ಕಚ್ಚಿ ಹರಿದಿದ್ದಾನೆ. ಕುಡಿದ ಅಮಲಿನಲ್ಲಿ ಆತ ಬಿರಿಯಾನಿ ಜೊತೆಗೆ ಕಿವಿಯನ್ನೂ ತಿಂದಿರುವ ಶಂಕೆ ವ್ಯಕ್ತಪಾಗಿದೆ. ಪ್ರಕರಣದ ಕುರಿತು ಚಾಲಕ ಮಧು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.