Districts

ಟಾಯ್ಲೆಟ್ ಗುಂಡಿ ವಿಚಾರಕ್ಕೆ ಗಲಾಟೆ: ಮಂಡ್ಯ ಎಸ್‍ಪಿ ಕಚೇರಿಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ

Published

on

Share this

ಮಂಡ್ಯ: ಶೌಚಾಲಯ ನಿರ್ಮಾಣದ ವಿಷಯವಾಗಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೊಬ್ಬರು ಎಸ್‍ಪಿ ಕಚೇರಿಯ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದ ನಿವಾಸಿ ಸತ್ಯನಾರಾಯಣ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು. ಇವರ ಮನೆ ಪಕ್ಕದಲ್ಲಿಯೇ ಸತೀಶ್ ಎಂಬುವರು ಶೌಚಾಲಯ ನಿರ್ಮಾಣಕ್ಕಾಗಿ ಗುಂಡಿಯನ್ನು ತೆಗೆಸುತ್ತಿದ್ದರು. ಆದರೆ ಗುಂಡಿ ತೆಗೆದರೆ ನಮ್ಮ ಮನೆಗೆ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಸತ್ಯನಾರಾಯಣ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಜೊತೆಗೆ ಗಲಾಟೆ ನಡೆದ ವೇಳೆ ಸತ್ಯನಾರಾಯಣ ಮತ್ತು ಅವರ ಕುಟುಂಬದವರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸುತ್ತಿದ್ದಾರೆ. ಆದರೆ ದೂರು ಕೊಟ್ಟು ಇಷ್ಟು ದಿನಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಮನನೊಂದು ಸತ್ಯನಾರಾಯಣ ಇಂದು ಎಸ್‍ಪಿ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಅವರ ಜೊತೆಗಿದ್ದವರು, ಪೊಲೀಸರ ಸಹಾಯದೊಂದಿಗೆ ಸಮೀಪದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಅವರು ಅವಧಿ ಮೀರಿದ ವಿಷವನ್ನು ಸೇವಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement