ಹೈದರಾಬಾದ್: ತೆಲಂಗಾಣದ (Telangana) ಭದ್ರಾದ್ರಿ ಜಿಲ್ಲೆಯಲ್ಲಿ ಮಾನವೀಯತೆ ಮರೆತ ತಂದೆಯೊಬ್ಬ ತನ್ನ ಮಗಳಿಗೆ ಕಾಲಿನಿಂದ ಒದೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭದ್ರಾದ್ರಿಯ ಕೊಥಗುಡೆಮ್ ಜಿಲ್ಲೆಯ ಬರ್ಗಂಪಡು ಮಂಡಲದ ಸಮೀಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಪಾಡಿಗೆ ತಾನು ಓದುತ್ತಾ ಕುಳಿತಿದ್ದ ಮಗಳ ಮುಂದೆ ಚೇರ್ ಹಾಕಿ ಕುಳಿತು, ಕಾಲಿನಿಂದ ಒದೆಯುವ ವಿಡಿಯೋವನ್ನು ಪತ್ನಿಯೇ ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ಸಮಸ್ಯೆಯಿಂದ ದೋಹಾಗೆ ಹೊರಟಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕ್ಯಾಲಿಕಟ್‌ಗೆ ವಾಪಸ್
ಐಸಿಡಿಎಸ್ ಮೇಲ್ವಿಚಾರಕಿ ಸಕ್ಕುಬಾಯಿ ತನಿಖೆ ನಡೆಸಿ ಬಾಲಕಿಯ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿಯ ತಾಯಿ ಚೈಲ್ಡ್‌ಲೈನ್-1098 ಸಹಾಯವಾಣಿಗೆ ಕರೆ ಮಾಡಿ ದೌರ್ಜನ್ಯದ ಬಗ್ಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಿರಿಯಾಲ ರಮೇಶ್, ಐಟಿಸಿ ಪೇಪರ್ ಬೋರ್ಡ್‌ಗಳಲ್ಲಿ ಉದ್ಯೋಗಿಯಾಗಿದ್ದಾನೆ. ಇದನ್ನೂ ಓದಿ: ಜಗದೀಪ್ ಧನಕರ್ ರಾಜೀನಾಮೆ – ಉಪ ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗ