ತಮಿಳುನಾಡಿಗೆ ಹುಲಿ ಉಗುರು ಸಾಗಿಸುತ್ತಿದ್ದ ಆರೋಪಿ ಬಂಧನ

Public TV
0 Min Read
tiger claws man arrests

ಚಾಮರಾಜನಗರ: ತಮಿಳುನಾಡಿಗೆ ಹುಲಿ ಉಗುರು ಸಾಗಿಸುತ್ತಿದ್ದವನನ್ನು ಚಾಮರಾಜನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಹುಲಿ ಉಗುರನ್ನು ವಶಕ್ಕೆ ಪಡೆದಿದ್ದಾರೆ.

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಪುಣಜನೂರು ವನ್ಯಜೀವಿ ವಲಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಚಾಮರಾಜನಗರ ತಾಲೂಕು ಬೂದಿಪಡಗ ಗ್ರಾಮದ ಚಿಕ್ಕಮಾದ ಬಂಧಿತ ಆರೋಪಿಯಾಗಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Share This Article