ಬೆಂಗಳೂರು: ನಡುರಸ್ತೆಯಲೇ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿ ಮಾಡಲಿಲ್ಲ ಎಂದು ಯುವತಿಗೆ ಯುವಕನೊಬ್ಬ ಕಿರುಕುಳ ನೀಡಿರೋ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಖಾಸಗಿ ಪಿಜಿ ಮುಂದೆ ನಡೆದಿದೆ.
ಸಂತ್ರಸ್ತ ಯುವತಿ ಕಿರುಚಾಡಿದ್ರೂ ಬಿಡದೇ ಬಟ್ಟೆ ಹರಿದು ಗಲಾಟೆ ಮಾಡಿ ಮೈ ಕೈ ಮುಟ್ಟಿ ಕಿರುಕುಳ ಕೊಟ್ಟಿದ್ದಾನೆ. ಪ್ರೀತಿ ಮಾಡಲ್ಲ ಅಂದ್ರೂ ಹಿಂದೆ ಬಂದು ಫಾಲೋ ಮಾಡಿ ನವೀನ್ ಕುಮಾರ್ ಎಂಬಾತ ಕಿರುಕುಳ ಕೊಟ್ಟಿದ್ದಾನೆ.
ಇನ್ಸ್ಟಾಗ್ರಾಮ್‌ನಲ್ಲಿ ನವೀನ್ ಯುವತಿಗೆ ಪರಿಚಯವಾಗಿದ್ದ. ಪರಿಚಯವಾಗಿದ್ದೇ ತಡ ಪ್ರೀತಿ ಮಾಡುವಂತೆ ಕಿರುಕುಳ ಕೊಡ್ತಿದ್ದ. ಈತನ ಕಾಟ ತಾಳಲಾರದೇ ಕಳೆದ ಆರು ತಿಂಗಳಲ್ಲಿ ಯುವತಿ 4-5 ಪಿಜಿ ಬದಲಿಸಿದ್ದಳು. ಯಾವ ಪಿಜಿಗೆ ಹೋದ್ರೂ ಬಂದು ಕಿರುಕುಳ ಕೊಡ್ತಿದ್ದ ಎನ್ನಲಾಗಿದೆ. ಅಲ್ಲದೇ ಕಿರುಕುಳಕ್ಕೆ ಬೇಸತ್ತು ತಾನು ಮಾಡ್ತಿದ್ದ ಟೆಲಿಕಾಲರ್ ಕೆಲಸವನ್ನೂ ಯುವತಿ ಬಿಟ್ಟಿದ್ದಳು.
ಯುವತಿ ದೂರಿನನ್ವಯ ಜ್ಞಾನಭಾರತಿ ಪೊಲೀಸರು ಆರೋಪಿ ನವೀನ್‌ಕುಮಾರ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

