ಬೆಳಗಾವಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಜನರಿಗೆ ಮೋಸ ಮಾಡಿ ಹಲ್ಲೆ ಮಾಡಿರುವ ಆರೋಪದಡಿ ಮೂಡಲಗಿಯಲ್ಲಿ ಖತರ್ನಾಕ್ ವಂಚಕ ಸ್ವಾಮೀಜಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಸ್ವಾಮೀಜಿ ಅಲ್ಲಮಪ್ರಭು ಹಿರೇಮಠ ಬಂಧಿತ ಆರೋಪಿ. ಬಂಧಿತ ಆರೋಪಿ ಅಲ್ಲಮಪ್ರಭು ಸ್ವಾಮೀಜಿಯ ರೀತಿ ಪೋಸ್ ಕೊಟ್ಟು ಜನರನ್ನು ವಂಚಿಸುತ್ತಿದ್ದನು. ಕಳೆದ 6 ತಿಂಗಳ ಹಿಂದೆ ಎಸ್‍ಸಿ ಕೋಟಾದಡಿ ‘ಡಿ’ ದರ್ಜೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮೂಡಲಗಿ ಪಟ್ಟಣದ ನಿವಾಸಿ ಸಂತೋಷ ಹವಳೆವ್ವಗೋಳ ಎಂಬಾತನಿಂದ 4 ಲಕ್ಷ ರೂಪಾಯಿ ಪಡೆದಿದ್ದನು. ಯುವಕ ಕೆಲಸ ಸಿಗದೇ ಇದ್ದಾಗ ಹಣ ವಾಪಸ್ ಕೇಳಿದ್ದಾನೆ. ಆಗ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
Advertisement
Advertisement
ಆಗಸ್ಟ್ 15ರಂದು ಹಣ ಕೇಳಲು ಹೋದಾಗ ಅಲ್ಲಮಪ್ರಭು ಹಿರೇಮಠ ಸಂಗಡಿಗರ ಜೊತೆಗೂಡಿ ಚಾಕುವಿನಿಂದ ಸಂತೋಷ ಹವಳೆವ್ವಗೋಳ ಬೆನ್ನಿಗೆ, ಕಾಲಿಗೆ ಚುಚ್ಚಿ ಗಾಯ ಮಾಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ಆರೋಪಿ ಅಲ್ಲಮಪ್ರಭು ಹಿರೇಮಠನನ್ನು ಬಂಧಿಸಿದ್ದಾರೆ. ಇದನ್ನೂ ಓದಿ : ಆಮದು ಸುಂಕ ಹೆಚ್ಚಿಸಿ, ಅಡಿಕೆ ಬೆಲೆ ಪರಿಷ್ಕರಿಸಿ – ಕೇಂದ್ರ ಸರ್ಕಾರಕ್ಕೆ ಗೃಹ ಸಚಿವರ ನೇತೃತ್ವದ ನಿಯೋಗ ಮನವಿ
Advertisement
Advertisement
ಇದಲ್ಲದೇ ಆರೋಪಿ ಅಲ್ಲಮಪ್ರಭು ಹಿರೇಮಠ ವಿರುದ್ಧ ಮತ್ತೊಂದು ವಂಚನೆ ದೂರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಂಗಳೂರು (ಬಿಬಿಎಂಪಿ) ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿ ಗೆಲ್ಲಿಸಿಕೊಡುವುದಾಗಿ 5 ಲಕ್ಷ ಹಣ ಪಡೆಯಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಿವಾಸಿ ಪ್ರಶಾಂತ್ ಕುಮಾರ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಅಲ್ಲಮಪ್ರಭು ವಿರುದ್ಧ ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಇನ್ಸ್‌ಪೆಕ್ಟರ್, ಕಾನ್‍ಸ್ಟೇಬಲ್ ನಾಗಿಣಿ ಡ್ಯಾನ್ಸ್ – ಇಬ್ಬರು ಎತ್ತಂಗಡಿ