ಮುಂಬೈ: ಬಂಜೆತನ ಸಮಸ್ಯೆ ನಿವಾರಿಸುವುದಾಗಿ ಹೇಳಿ ಮಹಿಳೆಯೊಬ್ಬಳ ಮೇಲೆ ನಿರಂತರವಾಗಿ ಎರಡು ತಿಂಗಳ ಕಾಲ ಅತ್ಯಾಚಾರ ಎಸಗಿದ್ದ ಸ್ವಯಂ ಘೋಷಿತ ದೇವ ಮಾನವನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ವೈರಾರ್ ನಗರದ ನಿವಾಸಿ ಅಜಯ್ ಚೌಧರಿ (45) ಬಂಧಿತ ಆರೋಪಿ. ಅಜಯ್ ನಿವಾಸದ ಮೇಲೆ ಪೊಲೀಸರು ಶುಕ್ರವಾರ ದಾಳಿ ಮಾಡಿ ಬಂಧಿಸಿದ್ದಾರೆ. ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಏನಿದು ಪ್ರಕರಣ?:
ನೈಗಾನ್ ನಿವಾಸಿ ವಿವಾಹಿತ ಮಹಿಳೆಯೊಬ್ಬರಿಗೆ (37) ಸುಮಾರು ವರ್ಷಗಳಿಂದ ಮಕ್ಕಳೇ ಆಗಿರಲಿಲ್ಲ. ಇದರಿಂದಾಗಿ ಮಹಿಳೆ ಮಾನಸಿಕವಾಗಿ ಕುಂದಿದ್ದರು. ಈ ಕುರಿತು ಅನೇಕ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಪರಿಚಿತರ ಸಹಾಯದಿಂದ ಸ್ವಯಂ ಘೋಷಿತ ದೇವಮಾನ ಅಜಯ್ ಚೌಧರಿ ಬಳಿಗೆ ಬಂದಿದ್ದರು. ತನ್ನ ಸಮಸ್ಯೆ ಹೇಳಿಕೊಂಡಿದ್ದ ಮಹಿಳೆಗೆ ವಿವಿಧ ಪೂಜೆ ಮಾಡುವಂತೆ ಅಜಯ್ ತಿಳಿಸಿದ್ದ.
ಅಜಯ್ ಸಲಹೆಯಂತೆ ಮಾತೃತ್ವಕ್ಕಾಗಿ ಸುಮಾರು ಪೂಜಾ ವಿಧಿ ವಿಧಾನಗಳನ್ನು ಮಹಿಳೆ ನೆರವೇರಿಸಿದ್ದಳು. ಹೀಗೆ ಸುಮಾರು ತಿಂಗಳು ಮಾಡಿದರೂ ಮಕ್ಕಳಾಗಲಿಲ್ಲ. ಇದರಿಂದಾಗಿ ಸ್ವಾಮೀಜಿಯನ್ನು ಮನೆಗೆ ಕರೆಸಿದರೆ ಉತ್ತಮ ಅಂತಾ ತಿಳಿದು, ಪೂಜೆಗೆಂದು ಕರೆದೊಯ್ದಿದ್ದಳು. ಈ ವೇಳೆ ಅಜಯ್ ಆಕೆಯ ಮೇಲೆ ಮೊದಲ ಬಾರಿ ಅತ್ಯಾಚಾರ ಎಸಗಿದ್ದಾನೆ.
ನಂತರ ಸುಮಾರು ದಿನಗಳ ಕಾಲ ಬೆದರಿಕೆಯೊಡ್ಡಿ ಮಹಿಳೆಯ ಮೇಲೆ ಅಜಯ್ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ಮಹಿಳೆ ಭಯಗೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಈ ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸಿದ ಪೊಲೀಸರು ಅಜಯ್ ಚೌಧರಿಯನ್ನು ಶುಕ್ರವಾರ ಆತನ ಮನೆಯಲ್ಲಿಯೇ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ) ಹಾಗೂ 506 (ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews