ಮುಂಬೈ: 20ರ ಹರೆಯದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ (Lover) ಬರ್ಬರವಾಗಿ ಇರಿದು ಕೊಂದು, ಆಕೆಯ ಶವವನ್ನು ರೈಲ್ವೆ ನಿಲ್ದಾಣದ (Railway Station) ಬಳಿಯ ಪೊದೆಯಲ್ಲಿ ಎಸೆದಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಘಟನೆಯ ಕುರಿತು ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಪ್ರತಿಕ್ರಿಯಿಸಿ, ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ ಎಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಆಕೆಯ ಮೃತದೇಹ ಅನೇಕ ಗಾಯದ ಗುರುತುಗಳು ಮತ್ತು ಇರಿತದ ಗಾಯಗಳನ್ನು ಒಳಗೊಂಡಿದೆ. ಇದು ಆಕೆಯನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ತೀರ್ಮಾನ – ಫಿಲ್ಮ್ ಚೇಂಬರ್ ಅಸಮಾಧಾನ
ಕೊಲೆಯಾದ ಯುವತಿಯನ್ನು ಯಶಶ್ರೀ ಶಿಂಧೆ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿತ್ತು. ಈಕೆ ಊರನ್ ನಿವಾಸಿಯಾಗಿದ್ದು, ಸುಮಾರು 25 ಕಿ.ಮೀ ದೂರದ ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಬಿನಿ, ಕೆಆರ್‌ಎಸ್ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ
ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೀತಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯ ಬಳಿಕ ಪ್ರಿಯಕರ ಕೂಡ ನಾಪತ್ತೆಯಾಗಿದ್ದಾನೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೇ ಆರೋಪಿ ಪ್ರಿಯಕರನ ಪತ್ತೆಗೆ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ – ಹಿಂದೂ ಸಂಘಟನೆಗಳ ಒಕ್ಕೂಟದಿಂದ ಕಮಿಷನರ್‌ಗೆ ದೂರು