ರಾಯಚೂರು: ಭತ್ತದ ಹೊಟ್ಟು ತುಂಬಿದ್ದ ಲಾರಿ ಎರಡು ಬೈಕ್‌ಗಳ ಮೇಲೆ ಪಲ್ಟಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ರಾಯಚೂರು (Raichuru) ಜಿಲ್ಲೆಯ ಸಿಂಧನೂರು (Sindhanuru) ತಾಲೂಕಿನ ಪಿಡಬ್ಲ್ಯುಡಿ ಕ್ಯಾಂಪ್ ಬಳಿ ನಡೆದಿದೆ.
ಮೃತರನ್ನು ಲಿಂಗಸುಗೂರು (Lingasuguru) ತಾಲೂಕಿನ ನೀರಾವರಿ ಇಲಾಖೆಯ ಎಂಜಿನಿಯರ್‌ಗಳಾದ ಮಲ್ಲಿಕಾರ್ಜುನ (28), ಶಿವರಾಜಕುಮಾರ (28) ಹಾಗೂ ಸಿಂಧನೂರಿನ ಕಂಪ್ಯೂಟರ್ ಆಪರೇಟರ್ ಮಹಿಬೂಬ್ ಪಾಷಾ (36) ಎಂದು ಗುರುತಿಸಲಾಗಿದೆ. ಇನ್ನೂ ಲಾರಿ ಚಾಲಕ ಹಾಗೂ ಕ್ಲಿನರ್‌ಗೆ ಗಾಯವಾಗಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ದರ್ಶನ್‌ಗೆ ಜಾಮೀನು – ಶೀಘ್ರವೇ ಸುಪ್ರೀಂನಲ್ಲಿ ಮೇಲ್ಮನವಿ
ಭತ್ತದ ಹೊಟ್ಟು ತುಂಬಿದ್ದ ಲಾರಿ ರಾಯಚೂರು ಮಾರ್ಗವಾಗಿ ತೆರಳುತ್ತಿತ್ತು. ಇದೇ ಸಮಯದಲ್ಲಿ ಊಟ ಮುಗಿಸಿ ಮೂವರು ಸೇರಿ ಎರಡು ಬೈಕ್‌ನಲ್ಲಿ ತಮ್ಮ ರೂಂಗಳಿಗೆ ತೆರಳುತ್ತಿದ್ದರು. ಈ ವೇಳೆ ಲಾರಿ ಪಲ್ಟಿ ಹೊಡೆದಿದ್ದು, ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆ ಹಿನ್ನೆಲೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ- ಬರ್ತ್‌ಡೇಗೆ ‘ಪರಾಕ್’ ಸಿನಿಮಾ ಅನೌನ್ಸ್