ಹಾವೇರಿ| ಟ್ರ‍್ಯಾಕ್ಟರ್‌ಗೆ ಲಾರಿ ಡಿಕ್ಕಿ – ರಸ್ತೆಗೆ ಬಿದ್ದ ಕ್ರೂಡ್ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದ ಜನ

Public TV
1 Min Read
Haveri Accident Crude Oil

ಹಾವೇರಿ: ಹೈವೇಯಲ್ಲಿ ಗಿಡಕ್ಕೆ ನೀರು ಹಾಕುತ್ತಿದ್ದ ವೇಳೆ ಟ್ರ‍್ಯಾಕ್ಟರ್‌ಗೆ (Tractor) ಲಾರಿ ಡಿಕ್ಕಿ ಹೊಡೆದ ಪರಿಣಾಮ ಬ್ಯಾರಲ್‌ನಲ್ಲಿ ತುಂಬಿದ್ದ ಕ್ರೂಡ್ ಆಯಿಲ್ (Crude Oil) ರಸ್ತೆಯಲ್ಲಿ ನೀರಿನಂತೆ ಹರಿದು ಹೋದ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ (Byadagi) ತಾಲೂಕಿನ ಮೊಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 48ರಲ್ಲಿ ನಡೆದಿದೆ.

ಘಟನೆಯಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದೆ. ಕೂಡಲೇ ಜಿಲ್ಲಾಸ್ಪತ್ರೆಗೆ ಲಾರಿ ಚಾಲಕನನ್ನು ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕ್ರೂಡ್ ಆಯಿಲ್ ತುಂಬಿಕೊಂಡು ಬೆಂಗಳೂರಿನ ಕಡೆಗೆ ಲಾರಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ‍್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಗಿಡಗಳಿಗೆ ನೀರು ಹಾಯಿಸುವ ಟ್ರ‍್ಯಾಕ್ಟರ್‌ಗೆ ಲಾರಿ ಗುದ್ದಿದೆ. ಇದನ್ನೂ ಓದಿ: ನಾನು ನಿತ್ಯ ಬೆಳಗ್ಗೆ 6:20ಕ್ಕೆ ಆಫೀಸ್‌ಗೆ ಹೋಗಿ ರಾತ್ರಿ 8:30 ಗಂಟೆ ವರೆಗೂ ಕೆಲಸ ಮಾಡ್ತಿದ್ದೆ: ನಾರಾಯಣ ಮೂರ್ತಿ

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಬಿದ್ದ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದರು. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಟರ್ಕಿ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ; 66 ಮಂದಿ ದುರ್ಮರಣ

Share This Article