ನೋಯ್ಡಾ: ಅಫ್ಘಾನಿಸ್ತಾನದಿಂದ ಭಾನುವಾರ ಸುಮಾರು 168 ಮಂದಿ ಗಾಜಿಯಾಬಾದ್‍ನ ಹಿಂಡನ್ ವಾಯುನೆಲೆಗೆ ಬಂದಿಳಿದರು. ಇದರಲ್ಲಿ ಮಕ್ಕಳು ಸಹ ಇದ್ದು, ಇದೀಗ ಇಬ್ಬರು ಮಕ್ಕಳು ನೆಟ್ಟಿಗರ ಗಮನ ಸೆಳೆದಿದ್ದಾರೆ. ತಾಯಿಯ ಮಡಿಲಲ್ಲಿದ್ದ ಪುಟ್ಟ ಕಂದಮ್ಮನಿಗೆ ಆತನ ಅಕ್ಕ ಮುತ್ತಿಟ್ಟ ಭಾವನಾತ್ಮಕ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
ವೀಡಿಯೋದಲ್ಲಿ, ಜನರ ಮಧ್ಯೆ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದಾಳೆ. ಈ ವೇಳೆ ಅಲ್ಲೆ ಇದ್ದ ಪುಟ್ಟ ಹುಡುಗಿಯೊಬ್ಬಳು ಆ ಮಗುವಿನ ಮುಂದೆ ಕುಣಿಯುತ್ತಾ ಕಿಸ್ ಕೊಡುತ್ತಾ ಮುದ್ದಾಡುತ್ತಿರುವುದನ್ನು ಕಾಣಬಹುದಾಗಿದೆ. ಮೇಲ್ನೋಟಕ್ಕೆ ಪುಟ್ಟ ಹುಡುಗಿ ಕಂದಮ್ಮನ ಸಹೋದರಿಯಂತೆ ಕಾಣುತ್ತದೆ. ಸದ್ಯ ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!
Advertisement
Advertisement
ಈ ವೀಡಿಯೋವನ್ನು ಸರಿಯಾಗಿ ಗಮನಿಸಿದಾಗ ಮಹಿಳೆ, ಕಳೆದ ಏಳು ದಿನಗಳಿಂದ ಅನುಭವಿಸುತ್ತಿರುವ ನರಕಯಾತನೆಯ ಬಗ್ಗೆ ಮಾತನಾಡುವುದನ್ನು ಸಹ ಕೇಳಬಹುದಾಗಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಅಲ್ಲಿ ನೆಲೆಸಿದ್ದ ಸಾವಿರಾರು ಮಂದಿ ನರಕಯಾತನೆ ಅನುಭವಿಸಿದ್ದಾರೆ. ಅನೇಕರು ದೇಶ ಬಿಟ್ಟು ತೆರಳಿದ್ದಾರೆ. ಇತ್ತ ಕನ್ನಡಿಗರನ್ನು ಭಾರತಕ್ಕೆ ಕರೆತರುವ ಪ್ರಯತ್ನವೂ ನಡೆಯುತ್ತಿದ್ದು, ಈಗಾಗಲೇ ಹಲವಾರು ಮಂದಿ ತಮ್ಮ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್
Advertisement
ಉಗ್ರರು ದೇಶವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ತಮ್ಮ ಕಣ್ಣ ಮುಂದೆ ನಡೆದಿದ್ದ ಘಟನೆಯನ್ನು ವಿವರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರ ಆರ್ತನಾದ ಕೇಳಲಾಗದೇ ಏರ್‍ಪೋರ್ಟ್‍ನ ಮುಳ್ಳುತಂತಿ ಗೋಡೆಯ ಮೇಲೆ ಹತ್ತಿದ ಅಮೆರಿಕ ಸೈನಿಕರು, ಆ ಮಹಿಳೆ ಮತ್ತು ಮಗುವೊಂದನ್ನು ಏರ್‍ಪೋರ್ಟ್ ಒಳಗೆ ಎಳೆದುಕೊಂಡಿದ್ದರು. ಕೆಲ ಪೋಷಕರು ತಮ್ಮ ಮುಂದಿನ ತಲೆಮಾರಾದ್ರೂ ತಾಲಿಬಾನಿಗಳ ಕ್ರೂರದೃಷ್ಟಿಗೆ ಬೀಳದಿರಲಿ ಎಂದು ಏರ್‍ಪೋರ್ಟ್ ಕಾಂಪೌಂಡ್ ಬಳಿ ನಿಂತು ಮಕ್ಕಳನ್ನು ಒಳಗೆ ಎಸೆದಿದ್ದು, ಹೀಗೆ ಎಸೆಯುವಾಗ ಕೆಲ ಮಕ್ಕಳು ಮುಳ್ಳಿನ ತಂತಿಗೆ ಸಿಲುಕಿ ಒದ್ದಾಡೋದನ್ನು ನೋಡಲು ಆಗ್ತಿಲ್ಲ ಎಂದು ಅಧಿಕಾರಿಯೊಬ್ಬರು ಕಣ್ಣೀರು ಇಟ್ಟಿದ್ದರು. ಇದನ್ನೂ ಓದಿ: ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!
#WATCH | An infant was among the 168 people evacuated from Afghanistan's Kabul to Ghaziabad on an Indian Air Force's C-17 aircraft pic.twitter.com/DoR6ppHi4h
— ANI (@ANI) August 22, 2021