ಆನೇಕಲ್: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ʻರಾಮʼ ಹೆಸರಿನ ಸಿಂಹವೊಂದು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (Bannerghatta National Park) ನಡೆದಿದೆ.
14 ವರ್ಷ ವಯಸ್ಸಿನ ರಾಮ ಎಂಬ ಹೆಸರಿನ ಸಿಂಹ (Lion) ಕೊನೆಯುಸಿರೆಳೆದಿದೆ. 2010ರಲ್ಲಿ ಸಿಂಹ ಗಣೇಶ ಮತ್ತು ಸಿಂಹಿಣಿ ಅನುಗೆ ಜನಿಸಿದ ಸಿಂಹವಾಗಿದ್ದು, ಅಂದಿನಿಂದ ಬನ್ನೇರುಘಟ್ಟದ ಜೈವಿಕ ಉದ್ಯಾನದಲ್ಲಿತ್ತು. ಇದನ್ನೂ ಓದಿ: ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ; ಭಕ್ತರಿಗೆ ಮೌನವೇ ದೊಡ್ಡ ಸಂದೇಶ: ಜೈಲಿಂದ ಬಂದ ಮುರುಘಾ ಶ್ರೀ
Advertisement
Advertisement
ಬುಧವಾರ ಬೆಳಗ್ಗೆ ಸಿಂಹಕ್ಕೆ ಇದ್ದಕ್ಕಿದ್ದಂತೆ ವಾಂತಿಯ ಲಕ್ಷಣಗಳು ಕಾಣಿಸಿಕೊಂಡು ನಿಶ್ಯಕ್ತಿಯಿಂದ ಬಳಲುತ್ತಿತ್ತು. ಕೂಡಲೇ ಬನ್ನೇರುಘಟ್ಟ ಪಶುವೈದ್ಯರ ತಂಡ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿತ್ತು. ಆದ್ರೆ ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ (ನ.16) ಸಾವನ್ನಪ್ಪಿದೆ. ಇದನ್ನೂ ಓದಿ: ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಬೀರಿದೆ – BJP ವ್ಯವಸ್ಥೆ ಹದಗೆಟ್ಟಿದೆ: ಜಗದೀಶ್ ಶೆಟ್ಟರ್
Advertisement
Advertisement
ಸಿಂಹ ಸಾವನ್ನಪ್ಪಿದ ಬಳಿಕ ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಬಹು ಅಂಗಾಂಗ ವೈಫಲ್ಯವಾಗಿರುವುದು ಕಂಡುಬಂದಿದೆ. ಪ್ರಾಣಿಯ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ IAH & VB ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.