ಚಾಮರಾಜನಗರ: ಹೊಂಗಹಳ್ಳಿಯಲ್ಲಿ 4 ಕರು ಕೊಂದಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಬೋನಿನಲ್ಲಿ ಚಿರತೆ ಕಂಡು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿಯಲ್ಲಿ ಒಂದೇ ದಿನ 4 ಕರುಗಳನ್ನು ಚಿರತೆ ಕೊಂದು ಹಾಕಿತ್ತು. ಚಿರತೆ ಉಪಟಳದಿಂದ ಜನರು ಆತಂಕಗೊಂಡಿದ್ದರು.
ಗ್ರಾಮದ ನಾಗಪ್ಪ ಎಂಬವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನ್ ಇರಿಸಲಾಗಿತ್ತು. ಕೊಟ್ಟಿಗೆ ಮಾದರಿ ಬೋನಿಗೆ ಐನಾತಿ ಚಿರತೆ ಸೆರೆ ಸಿಕ್ಕಿದೆ.
ಕಳೆದ 15 ದಿನಗಳ ಹಿಂದೆಯಷ್ಟೇ ನಾಗಪ್ಪ ಎಂಬವರಿಗೆ ಸೇರಿದ 4 ಕರುಗಳನ್ನು ಚಿರತೆ ಕೊಂದಿತ್ತು. ಬಂಡೀಪುರದ ಮದ್ದೂರು ವಲಯ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನಿರಿಸಿದ್ದರು.