ರಾಯಚೂರು: ಪ್ರಧಾನಿ ಮೋದಿಯಂತಹ (Narendra Modi) ನಾಯಕರು ದೇಶಕ್ಕೆ ಅನಿವಾರ್ಯ. ದೇಶಕ್ಕೆ ಮತ್ತೊಮ್ಮೆ ಅವರ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ. ಹಾಗೆಂದ ಮಾತ್ರಕ್ಕೆ ಇನ್ನೊಬ್ಬರು ಅಸಮರ್ಥರು ಅನ್ನೋ ಅರ್ಥವಲ್ಲ ಎಂದು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ (Mantralaya Shree) ಹೇಳಿದರು.
Advertisement
ಮೋದಿಯನ್ನ ಮತ್ತೆ ಆರಿಸಿ ತಂದರೆ ಉಳಿತೀರಿ. ಇಲ್ಲ, ನೀವ್ಯಾರು ಉಳಿಯಲ್ಲ ಎಂಬ ಬಾಗಲಕೋಟೆಯ ಮಹಲಿಂಗೇಶ್ವರ ಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸುಬುಧೇಂದ್ರ ತೀರ್ಥ ಶ್ರೀ, ದೇಶದ ಘನತೆ ಗೌರವ, ಭದ್ರತೆ ಹೆಚ್ಚಿಸುವಲ್ಲಿ ಪ್ರಧಾನಿ ಮೋದಿ ಜನಮನ ಗೆದ್ದಿದ್ದಾರೆ. ಪ್ರಭಾವಶಾಲಿಯಾಗಿ, ಪ್ರಭಾವಿ ನಾಯಕರಾಗಿ ಜನರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ಮತ್ತೆ ಮೋದಿ ನಾಯಕತ್ವ ಬೇಕು ಎಂದು ಹೇಳಿರುವುದು ತಪ್ಪಲ್ಲ ಎಂದರು. ಇದನ್ನೂ ಓದಿ: ಭಾನುವಾರ ದುಬೈನಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಉತ್ಸವ
Advertisement
ಈಗ ಮೋದಿ ದೇಶವನ್ನ ಸುಭದ್ರ, ಸದೃಢವಾಗಿ ಮುನ್ನಡೆಸುತ್ತಿದ್ದಾರೆ. ಅವರಿಗೆ ಕ್ಷೇಮವಾಗಲಿ ಅಂತ ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ ಎಂದು ಮಂತ್ರಾಲಯದ ಶ್ರೀ ಹೇಳಿದರು.
Advertisement
Advertisement
ಹುಲಿ ಉಗುರು (Tiger Claw Row) ವಿವಾದ ಕುರಿತು ಮಾತನಾಡಿದ ಶ್ರೀಗಳು, ವನ್ಯಜೀವಿಗಳ ರಕ್ಷಣೆ, ಪರಿಸರದ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರೆ. ಸರ್ಕಾರ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡುತ್ತೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತವಾದ ರೀತಿಯಲ್ಲಿ ವಿಚಾರ ಮಾಡುತ್ತೆ ಅಂತ ಭಾವಿಸಿದ್ದೇವೆ ಎಂದರು. ಇದನ್ನೂ ಓದಿ: ದಸರಾ ವಜ್ರಮುಷ್ಠಿ ಕಾಳಗದ ವಿಜೇತ ಚನ್ನಪಟ್ಟಣದ ಪ್ರವೀಣ್ ಜೆಟ್ಟಿಗೆ ಸನ್ಮಾನ
Web Stories