`ಗೊಂಬೆ’ಗೆ ಅದ್ದೂರಿ ಬೇಬಿಶಾವರ್

Public TV
1 Min Read
Neha Gowda 3

ಕ್ಷ್ಮಿ ಬಾರಮ್ಮ ಧಾರಾವಾಹಿ’ ಗೊಂಬೆ ಈಗ ತುಂಬು ಗರ್ಭಿಣಿ, ಸಪ್ಟೆಂಬರ್ ತಿಂಗಳಲ್ಲಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನೇಹಾ ಗೌಡಾ (Neha Gowda) ಅವರ ಸೀಮಂತ ಕಾರ್ಯಕ್ರಮ (, baby shower) ಅದ್ದೂರಿಯಾಗಿ ನಡೆದಿದೆ. ಕಿರುತೆರೆ ಕಲಾವಿದರ ದಂಡೇ ಹರಿದು ಬಂದಿದೆ. ಸೀಮಂತದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

Neha Gowda 2

ಚೈತ್ರಾ ವಾಸುದೇವನ್ ಹಂಚಿಕೊಂಡ ಫೋಟೋದಲ್ಲಿ ಗರ್ಭಿಣಿ ನೇಹಾ ಗೌಡ ಸಹೋದರಿ ಸೋನು ನಿಂತಿದ್ದಾರೆ. ಜೊತೆಗೆ ನೇಹಾ ಪತಿ ಚಂದನ್ ಕೂಡ ನಗುನಗುತ್ತಾ ಪೋಸ್ ಕೊಟ್ಟಿದ್ದಾರೆ. ಇನ್ನು ಕಿರುತೆರೆ ಕಲಾವಿದರ ದಂಡೇ ಹರಿದುಬಂದಿದ್ದು ಗೊಂಬೆಯ ಲಕ್ಷ್ಮಿ ಬಾರಮ್ಮ ಸೀರಿಯಲ್ ತಂಗಿ ಚಿನ್ನು ಅಲಿಯಾಸ್ ಕವಿತಾ ಗೌಡ  ಕೂಡ ಆಗಮಿಸಿದ್ದಾರೆ.

Neha Gowda 1

ಕವಿತಾ ಗೌಡ ಕೂಡ ಚೊಚ್ಚಲ ಮಗು ನಿರೀಕ್ಷೆಯಲ್ಲಿದ್ದಾರೆ. ಇನ್ನು ನೇಹಾ ಆಪ್ತ ಗೆಳತಿಯರಾದ ಅನುಪಮ ಗೌಡ-ಇಶಿತಾ ವರ್ಷ ಕೂಡ ಗೆಳತಿಯ ಸುಂದರ ಕ್ಷಣಗಳಿಗೆ ಜೊತೆಯಾಗಿದ್ರು. ಹಿರಿಯ ನಟಿ ತಾರಾ ಅನೂರಾಧ ಕೂಡ ಧಾರಾವಾಹಿ ಬೆಡಗಿಯರಿಗೆ ಸಾಥ್ ಕೊಟ್ಟಿದ್ದಾರೆ.

 

ಇತ್ತೀಚೆಗೆ ನಟಿ ಮಿಲನಾ ನಾಗರಾಜ್ ಸೀಮಂತ ನಡೆದಿತ್ತು. ಮಿಲನಾ ಸೀಮಂತಕ್ಕೆ ಸಿಂಗಾರ ಮಾಡಲಾಗಿತ್ತು. ಇದೀಗ ನೇಹಾ ಸೀಮಂತಕ್ಕೂ ಚೈತ್ರಾ ವಾಸುದೇವನ್ ಮೇಲ್ವಿಚಾರಣೆಯಲ್ಲೇ ಡೆಕೋರೇಶನ್ ಮಾಡಲಾಗಿರುವ ಅನುಮಾನವಿದೆ. ಇನ್ನು ನೇಹಾ ಸಾಂಪ್ರದಾಯಿಕ ಹಸಿರು ಬಣ್ಣದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದಾರೆ. ಒಟ್ಟಿನಲ್ಲಿ ಬರುವ ಸಪ್ಟೆಂಬರ್ ತಿಂಗಳು ಸ್ಯಾಂಡಲ್‌ವುಡ್ ಹಲವು ನಟಿಯರು ಚೊಚ್ಚಲ ಮಗುವನ್ನ ಬರಮಾಡಿಕೊಳ್ಳುವ ಸಂತಸದಲ್ಲಿದ್ದಾರೆ.

Share This Article