ಬೆಂಗಳೂರು: ಪ್ರಿಯಕರನ ಜೊತೆ ಸೇರಿಕೊಂಡು ಗಂಡನನ್ನೇ ಕೊಲೆ (Murder) ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ (Vidyaranyapura Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ದೇಬಿತಂಬಾಗ್ ಹಾಗೂ ಆಕೆಯ ಪ್ರಿಯಕರ ಬಾಬು ಅಲಿ ಬಂಧಿತ ಆರೋಪಿಗಳು (Accused). ಇದೇ ತಿಂಗಳ ನವೆಂಬರ್ 6ರಂದು ಪತಿ ರಾಕೇಶ್ ತೋಮಂಗನನ್ನು ಕೊಲೆ ಮಾಡಲಾಗಿತ್ತು. ಇದನ್ನೂ ಓದಿ: ದೇವರ ಪೂಜೆಗೆ ಎರಡು ಗುಂಪುಗಳ ನಡುವೆ ಗಲಾಟೆ – ಬೀಗ ಮುರಿದು ಪೂಜೆ ಮಾಡಿದ ಪೊಲೀಸರು
Advertisement
Advertisement
ಪತ್ನಿ ದೇಬಿತಂಬಾಗ್ ಹಾಗೂ ಆಕೆಯ ಪ್ರಿಯಕರ ಬಾಬು ಅಲಿ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ತಿಳಿದ ರಾಕೇಶ್ ತೋಮಂಗ ಪ್ರಶ್ನೆ ಮಾಡಿದ್ದ. ಈ ವೇಳೆ ಪತ್ನಿ ಮತ್ತು ಪ್ರಿಯಕರ ಸೇರಿ ತೋಮಂಗನನ್ನು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
Advertisement
Advertisement
ಸದ್ಯ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.