ನವದೆಹಲಿ: ಈಗಾಗಲೇ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಬೇಕಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಚಕಾರ ಎತ್ತಿಲ್ಲ. ಆದರೆ ಇದೀಗ ಸಂಸತ್ತಿನ ಬದಲು ದೆಹಲಿಯ ರಸ್ತೆಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ.
ದೇಶದ ಸಾವಿರಾರು ರೈತರು ಇಂದು ದೆಹಲಿಯ ಸಂಸತ್ ಮಾರ್ಗದಲ್ಲಿ `ಕಿಸಾನ್ ಮುಕ್ತಿ ಸಂಸತ್’ ನಡೆಸುತ್ತಿದ್ದಾರೆ. ಈ ಸಂಸತ್ತಿನಲ್ಲಿ ಸಾಲ ಮನ್ನಾ, ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಮಸೂದೆಗಳನ್ನು ಅಂಗೀಕರಿಸಲಿದ್ದಾರೆ. ಬಳಿಕ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಅವುಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದ್ದಾರೆ.
Advertisement
Advertisement
ಇದಕ್ಕಾಗಿ 170ಕ್ಕೂ ಹೆಚ್ಚು ರೈತ ಪರ ಸಂಘಟನೆಗಳು ಸೇರಿ `ಅಖಿಲ ಭಾರತ್ ಕಿಸಾನ್ ಸಂಘರ್ಷ ಸಮಿತಿ’ ರಚಿಸಿಕೊಂಡಿದ್ದು, ಕಳೆದ ಒಂದು ತಿಂಗಳಿನಿಂದ ದೇಶದೆಲ್ಲೆಡೆ ಕಿಸಾನ್ ಮುಕ್ತಿ ಯಾತ್ರೆ ನಡೆಸಿದ್ದರು. ಇವರ ಈ ಯಾತ್ರೆ ಸದ್ಯ ದೆಹಲಿ ತಲುಪಿದ್ದು, ಇಂದು ಬೃಹತ್ ಸಮಾವೇಶ ನಡೆಸುತ್ತಿದ್ದಾರೆ.
Advertisement
ರೈತರ ಪ್ರಮುಖ ಬೇಡಿಕೆಗಳೇನು..?
* ಕೃಷಿಕರ ಎಲ್ಲಾ ರೀತಿ ಸಾಲವನ್ನೂ ಬಡ್ಡಿ ಸಮೇತ ಮನ್ನಾ ಮಾಡಬೇಕು
* ಬೇಸಾಯದ ವೆಚ್ಚದ ಒಂದೂವರೆ ಪಟ್ಟು ದರವನ್ನು ಬೆಂಬಲ ಬೆಲೆಯಾಗಿ ನಿಗದಿ ಮಾಡಬೇಕು
* ನ್ಯಾಯಯುತ ಬೆಂಬಲ ಬೆಲೆ ನಿಗದಿಗಾಗಿ ಎಂ.ಎಸ್ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು
* ಸರ್ಕಾರಿ ನೌಕರರಿಗೆ ಪಿಂಚಣಿ ನೀಡುವಂತೆ ರೈತರಿಗೂ ಮಾಸಿಕ 5000ರೂ. ಪಿಂಚಣಿ ಸೌಲಭ್ಯ ಕಲ್ಪಿಸಬೇಕು