ತಿರುವನಂತಪುರಂ: ಕಳೆದ 5 ವರ್ಷಗಳಲ್ಲಿ 64 ಜನರಿಂದ ತಾನು ಲೈಂಗಿಕ ಶೋಷಣೆಕ್ಕೆ ಒಳಗಾಗಿರುವುದಾಗಿ ದಲಿತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಗೆ (Child Welfare Committee) ತಿಳಿಸಿದ್ದಾಳೆ.
ಬಾಲಕಿ ಮೂಲತಃ ಕೇರಳದವಳಾಗಿದ್ದು (Kerala), ಮಹಿಳಾ ಸಮಕ್ಯ ಎಂಬ ಎನ್‌ಜಿಒ ಸದಸ್ಯರು ತಮ್ಮ ನಿತ್ಯದ ಕ್ಷೇತ್ರ ಭೇಟಿಯ ಭಾಗವಾಗಿ ಬಾಲಕಿಯ ಮನೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಬಳಿಕ ಅವರು ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಿದ್ದಾರೆ. ಸಮಿತಿ ನಡೆಸಿದ ಕೌನ್ಸೆಲಿಂಗ್ ವೇಳೆಯಲ್ಲಿ ತನ್ನ 5 ವರ್ಷಗಳ ಕಾಲ ಅನುಭವಿಸಿದ ಕಷ್ಟವನ್ನು ಬಹಿರಂಗಪಡಿಸಿದ್ದಾಳೆ.ಇದನ್ನೂ ಓದಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಮೇಲೆ ಫೈರಿಂಗ್!
Advertisement
Advertisement
ಬಾಲಕಿಯೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಕೌನ್ಸೆಲಿಂಗ್ ಅವಧಿಯಲ್ಲಿ, ಆಕೆ 13 ವರ್ಷದವಳಿದ್ದಾಗ ಮೊದಲ ಬಾರಿ ನೆರೆಹೊರೆಯವರು ಆಕೆಯ ಮೇಲೆ ಲೈಂಗಿಕ ಶೋಷಣೆ ಎಸಗಿದರು. ಜೊತೆಗೆ ಆ ವ್ಯಕ್ತಿ ಆಕೆಯೊಂದಿಗೆ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡಿದ್ದ. ಅಲ್ಲಿಂದ ಪ್ರಾರಂಭವಾಗಿ ಕಳೆದ 5 ವರ್ಷಗಳಿಂದ ತನ್ನ ಮೇಲೆ 64 ಜನರು ಲೈಂಗಿಕ ಶೋಷಣೆ ಎಸಗಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ ಎಂದು ತಿಳಿಸಿದ್ದಾಳೆ.
Advertisement
ಶಾಲಾ ಸಮಯದಲ್ಲಿ ಕ್ರೀಡೆಯಲ್ಲಿ ಸಕ್ರಿಯವಾದ್ದೆ. ಆಗ ಕ್ರೀಡಾ ತರಬೇತಿ ಅವಧಿಯಲ್ಲಿ ಲೈಂಗಿಕ ಶೋಷಣೆಕ್ಕೆ ಒಳಗಾಗಿದ್ದೇನೆ. ಜೊತೆಗೆ ಆ ಸಮಯದಲ್ಲಿ ತನ್ನದೇ ಆದ ಕೆಲವು ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಇದೆಲ್ಲವು ಆಕೆಯಲ್ಲಿ ಭಯವನ್ನು ಹೆಚ್ಚಿಸಿದ್ದವು ಎಂದು ಬಹಿರಂಗಪಡಿಸಿದ್ದಾಳೆ.
Advertisement
ಬಾಲಕಿ ನೀಡಿದ ಹೇಳಿಕೆ ಆಧಾರದ ಮೇಲೆ ಮಕ್ಕಳ ಕಲ್ಯಾಣ ಸಮಿತಿಯವರು ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈವರೆಗೂ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯ ವಿವರವಾದ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪತ್ತನಂತಿಟ್ಟ ಜಿಲ್ಲಾಧ್ಯಕ್ಷ ಎನ್.ರಾಜೀವ್ ಮಾತನಾಡಿ, ಬಾಲಕಿ 8ನೇ ತರಗತಿಯಲ್ಲಿದ್ದಾಗಿನಿಂದ ಸುಮಾರು ಐದು ವರ್ಷಗಳ ಕಾಲ ಶೋಷಣೆಕ್ಕೊಳಗಾಗಿದ್ದಳು. ಅವಳು ಕ್ರೀಡೆಯಲ್ಲಿ ಸಕ್ರಿಯಳಾಗಿದ್ದಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ಆಕೆ ಲೈಂಗಿಕ ಶೋಷಣೆಕ್ಕೆ ಒಳಗಾಗಿದ್ದಳು. ಪ್ರಕರಣ ಗಂಭೀರವಾಗಿದ್ದು, ಸಮಿತಿಯು ಬಾಲಕಿಗೆ ಅಗತ್ಯ ಆರೈಕೆ ಮತ್ತು ರಕ್ಷಣೆ ನೀಡಲಿದೆ ಎಂದು ತಿಳಿಸಿದರು.ಇದನ್ನೂ ಓದಿ: MUDA Scam | ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್ ಆರೋಪ