ಕೊಪ್ಪಳ: ಇಲ್ಲೊಬ್ಬ ಪತಿ ಮಹಾಶಯ ಅಕ್ರಮ ಸಂಬಂಧ ಇಟ್ಟುಕೊಂಡ ಮಹಿಳೆಯೊಂದಿಗಿನ ವಿಡಿಯೋ ತೋರಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಪತಿಯ ವಿಚಿತ್ರ ನಡವಳಿಕೆಯಿಂದ ಬೇಸತ್ತ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಫೊಟೋದಲ್ಲಿರೋ ಭೂಪನ ಹೆಸರು ವೀರಭದ್ರಗೌಡ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ನಿವಾಸಿ. ಈತನಿಗೆ ಕಟ್ಟಿಕೊಟ್ಟ ಹೆಂಡತಿಗಿಂತ ಇಟ್ಕೊಂಡವಳೊಂದಿಗೆ ಜಾಸ್ತಿ ಸರಸವಂತೆ. ಈತ ಅಕ್ರಮ ಸಂಬಂಧ ಹೊಂದಿದ ಮಹಿಳೆಯೊಂದಿಗೆ ಮಲಗಿರೋ ವಿಡಿಯೋ, ಅವಳೊಂದಿಗೆ ಅಸಹ್ಯವಾಗಿ ಮಾತನಾಡುವ ಆಡಿಯೋವನ್ನ ತಂದು ತೋರಿಸಿ ಕಿರುಕುಳ ಕೊಡುತ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.
2011ರಲ್ಲಿ ವೀರಭದ್ರಗೌಡ ತನ್ನ ಅಕ್ಕನ ಮಗಳಾದ ವಿಶಾಲಾಕ್ಷಿಯನ್ನ ಮದುವೆಯಾಗಿದ್ದ. ಮದುವೆ ಆದ ಕೆಲವು ದಿನಗಳು ಮಾತ್ರ ಪತ್ನಿಯೊಂದಿಗೆ ಚೆನ್ನಾಗಿ ಸಂಸಾರ ಮಾಡಿದ್ದಾನೆ. ಆ ಬಳಿಕ ಈತನ ವಿಚಿತ್ರ ವರಸೆ ಶುರುವಾಗಿದೆ.
ವೀರಭದ್ರಗೌಡ ಅಕ್ರಮ ಸಂಬಂಧ ಇಟ್ಟುಕೊಂಡವಳೊಂದಿಗೆ ಇರೋದಕ್ಕಾಗಿ ಮೊದಲ ಪತ್ನಿಗೆ ಕಿರುಕುಳ ಕೊಡ್ತಿದ್ದಾನೆ. ಪತ್ನಿಗೆ ಕಿರುಕುಳ ಕೊಟ್ಟರೆ ತನಗೆ ವಿಚ್ಛೇದನ ಕೊಡಬಹುದು ಎಂದು ಈ ರೀತಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಪತ್ನಿಗೆ ನೀನು ಚೆಂದವಿಲ್ಲ, ಮುದುಕಿ ತರಹ ಇದ್ದೀಯಾ. ನೀನು ನನಗೆ ಡೈವೋರ್ಸ ಕೊಡು ಎಂದು ಹೊಡೆಯೋದು ಬಡಿಯೋದು ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನು ಒಂದು ತಿಂಗಳಿಂದಲ್ಲೂ ಈತ ಮನೆಗೆ ಬಂದಿಲ್ಲ. ಐದು ವರ್ಷದ ಗಂಡು ಮಗನಿಗೆ ಬೈಯುತ್ತಾನೆ. ಈಚೆಗೆ ಈತನ ತಂದೆಗೆ ಆರಾಮವಿಲ್ಲವೆಂದು ವಿಶಾಲಾಕ್ಷಿ ತಂದೆ ತಾಯಿ ಬಂದರೆ ಅವರನ್ನ ನಿಂಸಿದಿ ಹಲ್ಲೆ ಮಾಡಿದ್ದಾನೆ. ಆಗ ಬಿಡಿಸೋಕೆ ಹೋದ ವಿಶಾಲಾಕ್ಷಿ ಅಕ್ಕ ಶಶಿಕಲಾ ಮೇಲೂ ಹಲ್ಲೆ ಮಾಡಿ, ಅವಳನ್ನ ಹಿಡಿದು ಎಳದಾಡಿದ್ದಾನೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಿರೋ ಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೊಂದ ಮಹಿಳೆ ದೂರು ನೀಡಿದ್ದಾರೆ.