– ಬಿಜೆಪಿಯದ್ದು ಸಿಂಹದಂತೆ ಘರ್ಜನೆ, ಇಲಿಯ ವರ್ತನೆ ಎಂದ ಕಾಂಗ್ರೆಸ್ ಅಧ್ಯಕ್ಷ
– ಸಂಸತ್ ಚಳಿಗಾಲ ಅಧಿವೇಶನದಲ್ಲಿ ಕೋಲಾಹಲ
– ಸಂಸತ್ ಚಳಿಗಾಲ ಅಧಿವೇಶನದಲ್ಲಿ ಕೋಲಾಹಲ
ನವದೆಹಲಿ: ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನೀಡಿದ ಹೇಳಿಕೆ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಆಡಳಿತಾರೂಢ ಬಿಜೆಪಿ (BJP) ಸದಸ್ಯರು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದು, ಖರ್ಗೆ ನಿರಾಕರಿಸಿದ್ದಾರೆ.
What I said during Bharat Jodo Yatra in Rajasthan's Alwar was outside the House. What I said was politically outside the House, not inside. There is no need to discuss that here. Secondly, I can still say that they had no role in the freedom struggle: LoP in RS Mallikarjun Kharge pic.twitter.com/Rz9XGHUMGc
— ANI (@ANI) December 20, 2022
Advertisement
`ಭಾರತ್ ಜೋಡೋ ಯಾತ್ರೆ’ಯನ್ನು (Bharat Jodo Yatra) `ಭಾರತ್ ತೋಡೋ’ಎಂದು ಬಿಜೆಪಿ ಲೇವಡಿ ಮಾಡಿದ್ದಕ್ಕಾಗಿ ತಿರುಗೇಟು ನೀಡುವ ಸಂದರ್ಭದಲ್ಲಿ ಖರ್ಗೆ `ನಾಯಿ’ (Dog) ಎನ್ನುವ ಪದ ಬಳಕೆ ಮಾಡಿದ್ದು, ಅಧಿವೇಶನ ಗದ್ದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸರ್ಕಾರಿ ಹಣದಲ್ಲಿ AAP ಜಾಹೀರಾತು – 97 ಕೋಟಿ ವಸೂಲಿಗೆ LG ಆದೇಶ
Advertisement
ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ ಮಾತನಾಡಿದ್ದ ಖರ್ಗೆ, ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ‍್ಯವನ್ನು ತಂದುಕೊಟ್ಟಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿದಂತೆ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದ್ರೆ ಈ ದೇಶಕ್ಕಾಗಿ ಕಡೇ ಪಕ್ಷ ನಿಮ್ಮ ಮನೆಯ ನಾಯಿಯಾದರೂ ಸತ್ತಿದೆಯೇ? ಹಾಗಿದ್ದರೂ ಅವರು ದೇಶಭಕ್ತರು ಎಂದು ಹೇಳಿಕೊಳ್ಳುತ್ತಾರೆ. ನಾವೇನಾದರೂ ಮಾತನಾಡಿದ್ರೆ ನಮ್ಮನ್ನು ದೇಶದ್ರೋಹಿ ಎಂದು ಕರೆಯುತ್ತಾರೆ ಎಂದು ಗುಡುಗಿದ್ದಾರೆ.
Advertisement
Advertisement
ಅಲ್ಲದೇ ಚೀನಾದೊಂದಿಗಿನ (China Border Clash) ಗಡಿ ಘರ್ಷಣೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದಿದ್ದಕ್ಕಾಗಿ ಖರ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ಸರ್ಕಾರ ಹೊರನೋಟಕ್ಕೆ ಸಿಂಹದಂತೆ ಮಾತನಾಡುತ್ತಾರೆ. ಆದರೆ ಒಳಗೆ ಇಲಿಯಂತೆ ವರ್ತಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ಮೀಡಿಯಂ ಶಾಲೆಗಳ ಪರ ರಾಹುಲ್ ಗಾಂಧಿ ಬ್ಯಾಟಿಂಗ್
कांग्रेस ने हमेशा भारत को जोड़ने की बात की है।
देश की एकता के लिए इंदिरा गाँधी जी ने अपनी जान दी, राजीव गाँधी जी ने अपनी जान दी!
भाजपा और आरएसएस के किसी भी नेता ने देश को जोड़ने के लिए कोई भी बलिदान नहीं दिया।
आज़ादी की लड़ाई में भी, उन्होंने अंग्रेजों से केवल माफ़ी माँगी! pic.twitter.com/A39bBRDEAD
— Mallikarjun Kharge (@kharge) December 20, 2022
ಖರ್ಗೆ ಕ್ಷಮೆಗೆ ಆಗ್ರಹ:
ಖರ್ಗೆ ಅವರ ಹೇಳಿಕೆ ಬಿಜೆಪಿ ಸದಸ್ಯರನ್ನ ಕೆರಳಿಸಿದೆ. ಇಂದು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಖರ್ಗೆ ಅವರಿಂದ ಕ್ಷಮಾಪಣೆಗೆ ಆಗ್ರಹಿಸಿದ್ದಾರೆ. ಅಲ್ವಾರ್‌ನಲ್ಲಿ ನಿಂದನಾತ್ಮಕ ಭಾಷೆ ಬಳಸಿರುವುದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆ ಕೋರಬೇಕು ಎಂದು ರಾಜ್ಯಸಭೆಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಆಗ್ರಹಿಸಿದ್ದಾರೆ. ಈ ಬೇಡಿಕೆ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಈ ಹೇಳಿಕೆಯನ್ನು ಕಲಾಪದ ಹೊರಗಡೆ ಹೇಳಿದ್ದಾರೆ. ದೇಶದ 135 ಕೋಟಿ ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ. ನಾವೇನು ಚಿಕ್ಕ ಮಕ್ಕಳಲ್ಲ. ಯಾರೋ ಒಬ್ಬರು ಹೊರಗೆ ಏನೋ ಹೇಳಿರಬಹುದು. ಅದಕ್ಕೆ ಸದನದಲ್ಲಿ ಅನುಚಿತವಾಗಿ ವರ್ತಸುವುದು ಸರಿಯಲ್ಲ ಎಂದು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ (Jagdeep Dhankar) ಸದಸ್ಯರಿಗೆ ತಿಳಿಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]