– ಬ್ಯಾಡಗಿ ಮೆಣಸಿನಕಾಯಿ ದರ ದಿಢೀರ್ ಕುಸಿತಕ್ಕೆ ರೈತರ ಆಕ್ರೋಶ; ಪ್ರತಿಭಟನೆ
ಹಾವೇರಿ: ಬ್ಯಾಡಗಿ ಮೆಣಸಿನಕಾಯಿ (Byadagi Red Chilies) ದರ ದಿಢೀರ್ ಕುಸಿತದಿಂದ ಆಕ್ರೋಶಗೊಂಡಿರುವ ರೈತರು ಹಾವೇರಿಯಲ್ಲಿ (Haveri) ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ಮುಂದಾದ ಪೊಲೀಸರನ್ನೇ ರೈತರು ಅಟ್ಟಾಡಿಸಿದ್ದಾರೆ.
Advertisement
ಬ್ಯಾಡಗಿಯ ಆಡಳಿತ ಕಚೇರಿಯ ಮುಂದೆ ರೈತರು ನಿನ್ನೆಯಿಂದ (ಸೋಮವಾರ) ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಗಾಜು, ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಅಲ್ಲದೇ ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬ್ಯಾಡಗಿಯಲ್ಲಿ ಸಿಡಿದ ರೈತರು – ಮೆಣಸಿನ ಮಾರುಕಟ್ಟೆ ಕಚೇರಿ, ಅಗ್ನಿಶಾಮಕ ವಾಹನಕ್ಕೆ ಬೆಂಕಿ
Advertisement
Advertisement
ಪ್ರತಿಭಟನೆ ತಡೆಯಲು ಬಂದ ಪೊಲೀಸರನ್ನೇ ರೈತರು ಓಡಿಸಿದ್ದಾರೆ. ಆಡಳಿತದ ಕಚೇರಿ ಬಳಿ ಬಂದ 15 ಕ್ಕೂ ಅಧಿಕ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗದೇ ಸ್ಥಳದಿಂದ ಓಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ.
Advertisement
ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನಾಕಾರರು ಪೊಲೀಸರನ್ನು ಓಡಿಸಿದ್ದಾರೆ. ತಮಗೆ ಅಪಾಯ ಆಗಬಹುದೆಂಬ ಭೀತಿಯಿಂದ ಪೊಲೀಸರು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಇದನ್ನೂ ಓದಿ: ಬಿಜೆಪಿ ಕರ್ನಾಟಕ ಫಸ್ಟ್ ಲಿಸ್ಟ್ ಇಂದೇ ರಿಲೀಸ್ ಸಾಧ್ಯತೆ- ಸಂಭಾವ್ಯ ಅಭ್ಯರ್ಥಿಗಳು ಯಾರು?