ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ವಕ್ತಾರ, ಡಿಜಿ ಐಎಸ್‍ಪಿಆರ್ ಆಸಿಫ್ ಗಫೂರ್ ಹಾಗೂ ಕ್ರಿಕೆಟರ್ ಶಾಹೀದ್ ಅಫ್ರಿದಿ ಬಿಗಿದಪ್ಪಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮುಂದಿನ ಪಾಕ್ ಪ್ರಧಾನಿಯಾಗಾಲಿದ್ದಾರಾ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಚರ್ಚೆಯಾಗುತ್ತಿದೆ.
ಸಾಮಾಜಿಕ ಜಾಲತಾಣದ ಟ್ವಿಟ್ಟರಿನಲ್ಲಿ ಇಬ್ಬರು ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ನಿಡಾ ಖಾನ್, ಮುಂದಿನ ಪ್ರಧಾನಿಗೆ ವೇದಿಕೆ ಸಿದ್ದವಾಗುತ್ತಿದ್ಯಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದನ್ನು ಓದಿ: ಅಫ್ರಿದಿ ಹೇಳಿದ್ದು ಸರಿ, ಕಾಶ್ಮೀರ ಎಂದಿಗೂ ಭಾರತದದ್ದೇ: ರಾಜನಾಥ್ ಸಿಂಗ್
Advertisement
Advertisement
ಮಹಿಳೆಯ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಹಲವು ಮಂದಿ, ಅಫ್ರಿದಿ ಪಾಕಿಸ್ತಾನದ ಮುಂದಿನ ಪ್ರಧಾನಿಯಾದರೆ ಶೀಘ್ರವೇ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಿಂದಿರುಗಿಸಲು ಮುಂದಾಗುತ್ತಾರೆ ಎಂದು ಹೇಳಿದ್ದಾರೆ.
Advertisement
ಈ ಹಿಂದೆ ಹಲವು ಬಾರಿ ಕಾಶ್ಮೀರದ ಬಗ್ಗೆ ಮಾತನಾಡಿದ್ದ ಅಫ್ರಿದಿ, ಭಾರತ ಕಾಶ್ಮೀರದಲ್ಲಿ ಹಿಂಸೆ ನಡೆಸುತ್ತಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಮುಜಫರ್ ನಗರದಲ್ಲಿ ನಡೆಸಲಾಗಿದ್ದ ಸಮಾವೇಶದಲ್ಲಿ ಆಫ್ರಿದಿ ಭಾಗಿಯಾಗಿ ಭಾಷಣ ಕೂಡ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಿಣಾಮ ಇಮ್ರಾನ್ ಖಾನ್‍ರಂತೆಯೇ ಅಫ್ರಿದಿ ಕೂಡ ಅಧಿಕಾರಕ್ಕೆ ಬರಲು ಸೇನೆಯ ಸಂಬಂಧ ಬೆಳೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದರು. ಇದನ್ನು ಓದಿ: ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು
Advertisement
ಪಾಕಿಸ್ತಾನದಲ್ಲಿ ಸೇನೆಯೂ ಸರ್ಕಾರದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದು ಈ ಹಿಂದಿನಿಂದಲೂ ಸೇನೆ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತದೆಯೋ ಆ ಪಕ್ಷ ಗೆಲುವು ಪಡೆಯುತ್ತಾ ಬಂದಿದೆ. ಇಮ್ರಾನ್ ಖಾನ್ ಕೂಡ ಚುನಾವಣೆಯ ಸಂದರ್ಭದಲ್ಲಿ ಪಾಕ್ ಸೇನೆಯ ಮುಖ್ಯಸ್ಥರನ್ನು ಭೇಟಿ ಮಾಡಿದ್ದರು. ಪಾಕ್ ಸೇನೆ ಸಹ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿತ್ತು.
ಭಾರತದ ವಿರುದ್ಧ ದ್ವೇಷಕಾರುವ ವ್ಯಕ್ತಿಗೆ ಪಾಕ್ ಸೇನೆ ಯಾವಾಗಲೂ ಬೆಂಬಲ ನೀಡುತ್ತದೆ. ಅಧಿಕಾರ ನಡೆಸಿ ಯಾವುದೇ ಅನುಭವ ಇಲ್ಲದೇ ಇದ್ದರೂ ಭಾರತದ ವಿರುದ್ಧ ದ್ವೇಷ ಕಾರುವ ವ್ಯಕ್ತಿತ್ವ ಇದ್ದರೆ ಅವರಿಗೆ ಪಾಕ್ ಪ್ರಧಾನಿ ಪಟ್ಟ ಖಾಯಂ. ಈ ಎಲ್ಲ ವಿಚಾರದಲ್ಲಿ ಆಫ್ರಿದಿ ಪೂರ್ಣ ಅಂಕ ಗಳಿಸಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ: ಭಾರತ ಮನೋವೈದ್ಯರ ಬಳಿ ಕರೆದ್ಯೊಯುತ್ತೇನೆ – ಅಫ್ರಿದಿಗೆ ಗಂಭೀರ್ ಟಾಂಗ್