ಕೊಪ್ಪಳ: ಮನೆಯ ಬಾಡಿಗೆ ಕೊಟ್ಟಿಲ್ಲವೆಂದು ನೀರು, ವಿದ್ಯುತ್ ಕಟ್ ಮಾಡಿದ ಮನೆ ಮಾಲೀಕನಿಗೆ ಬಾಡಿಗೆದಾರರು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಕಲ್ಯಾಣ ನಗರದಲ್ಲಿ ನಡೆದಿದೆ.
ಬಾಬಾ ಹಲ್ಲೆಗೊಳಗಾದ ಮನೆಯ ಮಾಲೀಕ. ಬಾಬಾ ಮನೆಯಲ್ಲಿ ಮೊಹಮ್ಮದ್ ಎಂಬವರು 14 ತಿಂಗಳಿನಿಂದ ವಾಸವಾಗಿದ್ದಾರೆ. ಕೇವಲ ಎರಡು ದಿನ ಬಾಡಿಗೆ ನೀಡಲು ತಡ ಮಾಡಿದ್ದಕ್ಕೆ ಮನೆಯ ಓನರ್ ಬುಧವಾರದಿಂದಲೇ ಬಾಡಿಗೆದಾರರ ಮನೆಯ ನೀರು ಮತ್ತು ವಿದ್ಯುತ್ ಕಟ್ ಮಾಡಿದ್ದಾನೆ.
ಮುಂದಿನ ತಿಂಗಳು 1ನೇ ತಾರೀಖಿನಿಂದ ಮನೆಯನ್ನು ಖಾಲಿ ಮಾಡುತ್ತವೆ. ನಿಮ್ಮ ಬಳಿಯಿರುವ 10 ಸಾವಿರ ಡಿಪಾಸಿಟ್ ಹಣದಲ್ಲಿ ವಜಾ ಮಾಡಿಕೊಳ್ಳಿ ಎಂದು ಹೇಳಿದರೂ ಮನೆಯ ಓನರ್ ದರ್ಪ ತೋರಿದ್ದಾನೆ. ಇಂದು ಬೆಳಗ್ಗೆ ನೀರು ಕೊಡಿ ಎಂದು ಕೇಳಲು ಹೋದಾಗ ಮನೆಯ ಮಾಲೀಕ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡು ನಾನು ಮತ್ತು ನನ್ನ ಪತ್ನಿ ಇಬ್ಬರೂ ಸೇರಿ ಹೊಡೆದಿದ್ದೇವೆ ಎಂದು ಮೊಹಮದ್ ಜೀಲಾನಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.