ಮಂಗಳೂರು: ಸತತ ಎರಡು ದಿನಗಳಿಂದ ನಡೆಯುತ್ತಿದ್ದ ಪಾಯಿಂಟ್ 13ರ ಶೋಧ ಕಾರ್ಯ ಅಂತ್ಯಗೊಂಡಿದ್ದು ಯಾವುದೇ ಮೂಳೆ ಸಿಕ್ಕಿಲ್ಲ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿರುವ (Dharmasthala Burial Case) ಮುಸುಕುಧಾರಿ ಆರೋಪದ ಮೇರೆಗೆ ಎಸ್‌ಐಟಿ ಶೋಧ ಕಾರ್ಯ ಆರಂಭಿಸಿ ಇಂದಿಗೆ 14 ಕಳೆದಿದೆ. ದೂರುದಾರನ ಮನವಿಯಂತೆ ಪಾಯಿಂಟ್ 13ರ ಉತ್ತರ ದಿಕ್ಕಿನಲ್ಲಿ ಶೋಧಕಾರ್ಯ ನಡೆಯಿತು. ಇದನ್ನೂ ಓದಿ: ಹೆಣ ಹೂತಿದ್ದು ಈತನಲ್ಲ, ಈತನೇ ಹೆಣ ಹೂತಿದ್ದು – ಇಬ್ಬರು ದೂರುದಾರರ ಹೇಳಿಕೆಯಿಂದ ಎಸ್‌ಐಟಿಗೆ ಗೊಂದಲ
ಸಣ್ಣ ಹಿಟಾಚಿ ಬಳಿಕ ದೊಡ್ಡ ಹಿಟಾಚಿ ಯಂತ್ರದ ಮೂಲಕ ಗುಂಡಿ ತೋಡುವ ಕಾರ್ಯ ನಡೆಯಿತು. ಉತ್ಖನನದ ವೇಳೆ ಮಳೆ ಬಂದು ಗುಂಡಿಯಲ್ಲಿ ನೀರು ಒರತೆ ರೂಪದಲ್ಲಿ ಬರುತ್ತಿತ್ತು. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋರನ್ನ ಗುಂಡಿಕ್ಕಿ ಕೊಲ್ಲಿ: ರೇಣುಕಾಚಾರ್ಯ
ಎಸ್‌ಐಟಿ ಅಧಿಕಾರಿಗಳು ಪಂಪ್‌ಸೆಟ್ ಮೂಲಕ ಗುಂಡಿಯಲ್ಲಿದ್ದ ನೀರನ್ನು ಹೊರ ಹಾಕಿದರು. 32 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳ ಗುಂಡಿ ತೋಡಿದರೂ ಯಾವುದೇ ಮೂಳೆಗಳು ಪತ್ತೆಯಾಗಲಿಲ್ಲ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿದರೂ ಏನು ಸಿಗದ ಕಾರಣ ಕೊನೆಗೆ ತೆಗೆದ ಗುಂಡಿಗೆ ಅದೇ ಮಣ್ಣನ್ನು ಸುರಿದು ಮುಚ್ಚಲಾಯಿತು.