ಬೆಂಗಳೂರು: ಕೆಐಎಎಲ್(ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು) ಏರ್ಪೋರ್ಟ್‌ನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಬರುವುದು ಸಾಮಾನ್ಯವಾಗಿದೆ. ಆದರೆ ಈ ಸುದ್ದಿ ಸ್ವಲ್ಪ ಭಿನ್ನವಾಗಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ಟಾಯ್ಲೆಟ್ ಟಿಶ್ಯೂ ಪೇಪರ್ ಮೇಲೆ ಫ್ಲೈಟ್‍ನಲ್ಲಿ ಬಾಂಬ್ ಇದೆ ಎಂದು ಬರೆದು ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ಭಾನುವಾರ ರಾತ್ರಿ 9:30ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನ ಹೊತ್ತು ತಂದಿದ್ದ ಇಂಡಿಗೋ ವಿಮಾನದ ಫ್ಲೈಟ್ ಟಾಯ್ಲೆಟ್ ಟಿಶ್ಯೂ ಪೇಪರ್ ಮೇಲೆ ಅನಾಮಧೇಯನೊಬ್ಬ ಗೀಚಿದ ಬರಹ ಎಲ್ಲರಿಗೂ ತಲೆಬಿಸಿ ಮಾಡಿತ್ತು. ಈ ಪೇಪರ್‍ನಲ್ಲಿ, ಲ್ಯಾಂಡ್ ನಾ ಕರ್ನಾ, ಇಸ್ ಪ್ಲೈಟ್ ಮೇ ಬಾಂಬ್ ಹೈ(ಈ ಫ್ಲ್ಯೆಟ್ ಲ್ಯಾಂಡ್ ಮಾಡಬೇಡಿ. ಇದರಲ್ಲಿ ಬಾಂಬ್ ಇದೆ) ಎಂದು ಹಿಂದಿ ಭಾಷೆಯಲ್ಲಿ ಬರೆದಿತ್ತು. ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿ – ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕಿ
Advertisement
Advertisement
ವಿಮಾನದ ಪೈಲಟ್ ಗಮನಕ್ಕೆ ಬಂದ ಕೂಡಲೇ ಕೆಐಎಎಲ್ ಎ ಭದ್ರತಾ ಏಜೆನ್ಸಿ ಸಂಪರ್ಕಿಸಿ, ಅನುಮತಿ ಬಳಿಕ ಫ್ಲೈಟ್ ಲ್ಯಾಂಡ್ ಮಾಡಿದ್ದಾರೆ. ಬರಹವುಳ್ಳ ಟಿಶ್ಯೂ ಪೇಪರ್ ಗಮನಿಸಿ ಸಿಬ್ಬಂದಿ ಕಾಕ್ ಪಿಟ್ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಅISಈ ಮತ್ತು ವಾಯು ಸಂಚಾರ ನಿಯಂತ್ರಣ ಘಟಕ ಸಿಬ್ಬಂದಿ ಸಂಪರ್ಕ ಮಾಡಿದೆ.
Advertisement
Advertisement
ಪ್ರತ್ಯೇಕ ಸ್ಥಳಕ್ಕೆ ಫ್ಲೈಟ್ ಸ್ಥಳಾಂತರ ಮಾಡಿ ತೀವ್ರ ತಪಾಸಣೆ ಮಾಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಅISಈ ನಿಂದ ತಪಾಸಣೆ ಮಾಡಲಾಗಿದ್ದು, ಯಾವುದೇ ರೀತಿಯ ಬಾಂಬ್ ಪತ್ತೆಯಾಗಿಲ್ಲ. ಈ ಹಿನ್ನೆಲೆ ಫ್ಲೈಟ್‍ನಲ್ಲಿದ್ದ ಪ್ರತಿಯೊಬ್ಬ ಪ್ರಯಾಣಿಕರ ಕೈಬರಹ ಮಾದರಿ ಸಂಗ್ರಹ ಮಾಡಲಾಗಿದೆ. ಇದನ್ನೂ ಓದಿ: 10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ
ಹುಸಿ ಬಾಂಬ್ ಕರೆ ಹಿನ್ನೆಲೆ ವಿಮಾನ 3 ಗಂಟೆ ತಡವಾಗಿ ಜೈಪುರಕ್ಕೆ ಪ್ರಯಾಣಿಕರ ಹೊತ್ತೊಯ್ದಿದೆ.