ಬೀದರ್: ಕಿತ್ತು ತಿನ್ನುವ ಬಡತನದಲ್ಲಿ ಸಂಕಷ್ಟದ ಜೀವನ ಮಾಡುತ್ತಿದ್ದ ಕ್ಷೌರಿಕನ ಬಾಳಲ್ಲಿ `ಹೈಟೆಕ್ ಪಬ್ಲಿಕ್ ಸಲೂನ್’ ಹರ್ಷ ಮೂಡಿಸಿದ್ದು, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಿಂದ ಸಹಾಯ ಹಸ್ತ ಒದಗಿ ಬಂದಿದೆ.
ಇಂದು, ನಾಳೆ ಬೀಳುತ್ತದೆ ಎಂಬ ಭಯದಲ್ಲಿ ಸಲೂನ್‌ಗೆ ಯಾರು ಗ್ರಾಹಕರಿಲ್ಲದೇ, ಪೋಷಕರನ್ನು ನೋಡಿಕೊಳ್ಳಲಾಗದೇ ಕ್ಷೌರಿಕ ಕಣ್ಣೀರು ಹಾಕುವಂತ್ತಾಗಿತ್ತು. ಪಬ್ಲಿಕ್ ಟಿವಿಯ (PUBLiC TV) ಬೆಳಕು ಕಾರ್ಯಕ್ರಮ’ದಲ್ಲಿ ಪಬ್ಲಿಕ್ ಟವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ (HR Ranganath) ಅವರು ಕೊಟ್ಟ ಮಾತಿನಂತೆ ಇಂದು (ನ.6) ಕುಗ್ರಾಮದಲ್ಲಿ ಹೈಟೆಕ್ ಪಬ್ಲಿಕ್ ಸಲೂನ್ ಲೋಕಾರ್ಪಣೆಯಾಗಿದೆ.ಇದನ್ನೂ ಓದಿ: ಇಸ್ರೆಲ್ ರಕ್ಷಣಾ ಸಚಿವನನ್ನೇ ವಜಾಗೊಳಿಸಿದ ಪ್ರಧಾನಿ ನೆತನ್ಯಾಹು
Advertisement
Advertisement
ಬೀದರ್ (Bidar) ತಾಲೂಕಿನ ಅಲಿಯಂಬರ್ ಗ್ರಾಮದ ಶಿವಶಂಕರ್ ಇಂದು, ನಾಳೆ ಬೀಳುತ್ತದೆ ಎಂಬ ಭಯದಲ್ಲಿ ಬೀಳುವ ಹಂತದಲ್ಲಿದ್ದ ಒಂದು ಪುಟ್ಟ ಕಟ್ಟಿಗೆಯ ಅಂಗಡಿಯಲ್ಲಿ ಕ್ಷೌರ ಮಾಡುತ್ತಿದ್ದರು. ಮಳೆಯಿಂದ ಸಲೂನ್ ಸೋರಿಕೆಯಾಗಿ, ಗ್ರಾಹಕರು ಬರದೇ ಬಿಡಿಗಾಸು ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ನಿರಾಸೆಯಾಗಿ ಪ್ರತಿದಿನ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗುತ್ತಿದ್ದರು.
Advertisement
ಸಂಕಷ್ಟದಲ್ಲಿ ನೊಂದು ಹೋಗಿದ್ದ ಬಡಪಾಯಿ ಕ್ಷೌರಿಕ ದುಸ್ಥಿತಿ ಬಗ್ಗೆ `ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ’ದಲ್ಲಿ ಸೆ.29 ರಂದು ಪ್ರಸಾರ ಮಾಡಲಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ಬಳಿ ಕುಟುಂಬದ ಒಂದು ಹೊತ್ತಿನ ಊಟಕ್ಕಾಗಿ ಒಂದು ಸುಸರ್ಜಿತ ಹೊಸ ಸಲೂನ್ ನಿರ್ಮಾಣ ಮಾಡಿಕೊಡಿ ಎಂದು ಕ್ಷೌರಿಕ ಶಂಕರ್ ಸಹಾಯ ಹಸ್ತ ಚಾಚಿದ್ದರು. ಅಂದು ಹೆಚ್.ಆರ್ ರಂಗನಾಥ್ ಅವರು ಒಂದು ಸುಸರ್ಜಿತ ಹೊಸ ಕಟಿಂಗ್ ಶಾಪ್ ನಿರ್ಮಾಣ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಹೈಟೆಕ್ ಪಬ್ಲಿಕ್ ಸಲೂನ್ ಲೋಕಾರ್ಪಣೆಯಾಗಿದೆ. ಎರಡು ಬಿಗ್ ಬಾಸ್ ಹೈಟೆಕ್ ಛೇರ್‌ಗಳು, ಕಟಿಂಗ್ ಮಾಡುವ ಹೊಸ ಪರಿಕರಗಳು, ಬಹುತೇಕ ಅಂಗಡಿಗೆ ಫರ್ನಿಚರ್ ಅಳವಡಿಕೆ, ಅಂಗಡಿಯ ಒಳಗಡೆ ಎಲ್ಲಾ ಕಡೆ ಹೊಸ ಗ್ಲಾಸ್‌ಗಳ ಅಳವಡಿಕೆ, ಹೊಸ ತಗಡಿನ ಶೀಟ್ ಸೇರಿದಂತೆ 1 ಲಕ್ಷ 20 ಸಾವಿರ ರೂ. ಖರ್ಚು ಮಾಡಿ ಸಲೂನ್ ನಿರ್ಮಾಣ ಮಾಡಲಾಗಿದೆ.
Advertisement
ಇದಕ್ಕೆ ದಾನಿಗಳಾದ ಸ್ಪಿನ್ ಸಲೂನ್ ಅಕಾಡೆಮಿಯ ಸಂಸ್ಥಾಪಕರಾದ ನಾಮದೇವ್ ಅವರು ಇದನ್ನು ನಿರ್ಮಾಣ ಮಾಡಿಕೊಟ್ಟಿದ್ದು, ಇಂದು ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಹಾಗೂ ಹೆಚ್.ಆರ್ ರಂಗನಾಥ್ ಅವರ ಸ್ಪೂರ್ತಿಯಾಗಿ ಇಂದು ನಾನು ಸಹಾಯ ಮಾಡುತ್ತಿದ್ದೇನೆ. ಕ್ಷೌರಿಕನಿಗಾಗಿ ಒಂದು ಲಕ್ಷ 20 ಸಾವಿರ ರೂ. ಖರ್ಚು ಮಾಡಿ, ನಾವು ಇಂದು ಪಬ್ಲಿಕ್ ಸಲೂನ್ ನಿರ್ಮಾಣ ಮಾಡಿದ್ದೇವೆ. ಇನ್ನೂ ಮುಂದೆ ಈ ಕ್ಷೌರಿಕ ದುಪ್ಪಟ್ಟು ಹಣ ಸಂಪಾದನೆ ಮಾಡಿ, ಸುಂದರ ಬದುಕು ಕಟ್ಟಿಕೊಳ್ಳಲಿ. ಸಹಾಯ ನೀಡಲು ಅನುವು ಮಾಡಿಕೊಟ್ಟ ಪಬ್ಲಿಕ್ ಟಿವಿಗೆ ಅನಂತ ಧನ್ಯವಾದಗಳು ಎಂದರು.
ಶಿವಶಂಕರ್ ಇಂದು ಹೈಟೆಕ್ ಕಟಿಂಗ್ ಶಾಪ್‌ನ ಮಾಲೀಕರಾಗಿದ್ದು, ಅವರ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ. ಯಾಕೆಂದರೆ ಇಡೀ ಅಲಿಯಂಬರ್ ಹೊಬಳಿಯಲ್ಲೇ ಈ ರೀತಿಯ ಹೈಟೆಕ್ ಸಲೂನ್ ಎಲ್ಲಿಯೂ ಇಲ್ಲ. ಇದರಿಂದ ದುಪ್ಪಟ್ಟು ಹಣಗಳಿಸಿ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳವ ಪಣ ತೊಟ್ಟಿದ್ದಾರೆ. ಈ ಹಿಂದೆ 200 ರಿಂದ 300 ರೂ. ಗಳಿಸುತ್ತಿದ್ದ ಕ್ಷೌರಿಕ ಇಂದು 500 ರಿಂದ 100 ಸಾವಿರ ರೂ. ಗಳಿಸುವ ಹೈಟೆಕ್ ಸಲೂನ್ ಮಾಲೀಕನಾಗಿದ್ದಾರೆ.
ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಸಹಾಯವಾದ ಕಾರಣ ಈ ಕಟಿಂಗ್ ಶಾಪ್‌ಗೆ “ಪಬ್ಲಿಕ್ ಸಲೂನ್” ಎಂದು ಹೆಸರಿಡಲಾಗಿದೆ. ಕ್ಷೌರಿಕ್ ಶಂಕರ್ ಮಾತನಾಡಿ, ಈ ಬಗ್ಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ಇಂದು ಲಕ್ಷಾಂತರ ಹಣ ಖರ್ಚು ಮಾಡಿ ಹೈಟೆಕ್ ಸಲೂನ್ ನಿರ್ಮಾಣ ಮಾಡಿಕೊಟ್ಟಿದ್ದು, ನನಗೆ ಬಹಳ ಸಂತೋಷವಾಗಿದೆ. ರಂಗನಾಥ್ ಅವರಿಗೆ, ಪಬ್ಲಿಕ್ ಟಿವಿಗೆ ಹಾಗೂ ಸ್ಪಿನ್ ಸಲೂನ್ ಅಕಾಡೆಮಿಗೆ ಅನಂತ ಕೋಟಿ ಧನ್ಯವಾದಗಳು ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ