ಬಿಗ್ಬಾಸ್ ಸೀಸನ್ 12 ಯಶಸ್ವಿ 9 ವಾರಗಳನ್ನ ಪೂರೈಸಿ, 10ನೇ ವಾರಕ್ಕೆ ದಾಪುಗಾಲಿಟ್ಟಿದೆ. ಬಿಗ್‌ಬಾಸ್ ಮನೇಲಿ ದಿನದಿಂದ ದಿನಕ್ಕೆ ಜಗಳ, ವಾರದಿಂದ ವಾರಕ್ಕೆ ಜಗಳ ವಿಪರೀತವಾಗುತ್ತಿದೆ. ಗಿಲ್ಲಿ ಮೇಲೆ ಬಿಗ್‌ಬಾಸ್ ಸ್ಪರ್ಧಿಗಳು ಒಬ್ಬರಾದಮೇಲೆ ಒಬ್ಬರಂತೆ ಹರಿಹಾಯುತ್ತಿದ್ದಾರೆ. ಗಿಲ್ಲಿಯೂ ಅಷ್ಟೇ ಖಡಕ್ ಆಗಿಯೇ ತಿರುಗೇಟು ಕೊಡುತ್ತಿದ್ದಾರೆ. ಈ ವಾರದ ಶುರುವಿನಲ್ಲೇ ದೊಡ್ಮನೆಯಲ್ಲಿ ಮಾರಾಮಾರಿ ನಡೆದುಹೋಗಿದೆ.
ಗಿಲ್ಲಿ ಮೇಲೆ ಹರಿಹಾಯ್ದಿದ್ದಾರೆ ಮ್ಯೂಟಂಟ್ ರಘು. ಪದೇ ಪದೇ ಗಿಲ್ಲಿನೇ ಟಾರ್ಗೆಟ್ ಆಗ್ತಿರೋದ್ಯಾಕೆ..? ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ರಘು ಪ್ರೀತಿಯಿಂದಲೇ ಮಾತಿಗಿಳಿಯುತ್ತಿದ್ದರು. ಇಬ್ಬರ ಮಧ್ಯೆ ಚೇಷ್ಟೆ, ತಮಾಷೆಗಳು ಕೂಡಾ ನಡೆಯುತ್ತಿದ್ದವು. ಆದರೆ ಗಿಲ್ಲಿ ಮೇಲೆ ಮ್ಯೂಟಂಟ್ ರಘು ಕೆಂಡ ಕಾರಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಮಾರಾಮಾರಿ ನಡೆದುಹೋಗಿದೆ.
ಇತ್ತೀಚೆಗೆ ಗಿಲ್ಲಿಯ ಬಟ್ಟೆ ಕಿತ್ತೆಸೆದಿದ್ದ ರಘು ಈಗ ಗಿಲ್ಲಿ ಜೊತೆ ಜಗಳಕ್ಕೆ ನಿಂತಿದ್ದಾರೆ. ಕಿಚ್ಚನ ಪಂಚಾಯ್ತಿ ಬಳಿಕವೂ ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಜೋರಾಗಿದೆ ಕದನ. ಗಿಲ್ಲಿ ಮೇಲೆ ಹರಿಹಾಯ್ದ ವಿಡಿಯೋ ಸಖತ್ ವೈರಲ್ ಆಗ್ತಿದೆ. ಗಿಲ್ಲಿಯ ಅಭಿಮಾನಿಗಳು ರಘು ಮಾಡ್ತಿರೋದು ಸರಿಯಲ್ಲ ಅನ್ನೋ ಅಭಿಪ್ರಾಯ ಹೊರ ಹಾಕಿದ್ರೆ, ಇನ್ನೂ ಕೆಲವರು ರಘು ಪರ ನಿಂತಿದ್ದಾರೆ.


