ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಕೈಯಲ್ಲಿ ಕೈತುಂಬಾ ಸಿನಿಮಾಗಳಿವೆ. ಜು.12ರಂದು ಶಿವಣ್ಣನ ಹುಟ್ಟುಹಬ್ಬದಂದು ಚಿತ್ರಗಳ ವಿಶೇಷ ಅಪ್‌ಡೇಟ್ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಡಲಿದೆ ಚಿತ್ರತಂಡ. ನಟನ ಸಿನಿಮಾಗಳಿಗೆ ಎದುರು ನೋಡ್ತಿರುವವರಿಗೆ ಇದು ಗುಡ್ ನ್ಯೂಸ್.
ಇತ್ತೀಚೆಗೆ ‘ಭೈರತಿ ರಣಗಲ್’ (Bhairathi Rangal) ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ ಮುಗಿದಿದೆ. ನಟನ ಹುಟ್ಟುಹಬ್ಬದಂದು ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದೆ. ಇದರ ಕುರಿತು ಜು.7ರಂದು ಅಪ್‌ಡೇಟ್ ಸಿಗಲಿದೆ. ‘ಉತ್ತರಕಾಂಡ’ (Uttarakanda) ಚಿತ್ರದ ಶಿವಣ್ಣನ ಕ್ಯಾರೆಕ್ಟರ್‌ನ ಟೀಸರ್ ಸಹ ಬಿಡುಗಡೆ ಆಗುವ ಸಾಧ್ಯತೆಯಿದೆ.
ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿರುವ ‘ಫೈರ್ ಪ್ಲೈ’ ಸಿನಿಮಾದಲ್ಲಿ ಶಿವಣ್ಣ ಗೆಸ್ಟ್ ರೋಲ್ ಮಾಡಿದ್ದಾರೆ. ಇವರ ಪಾತ್ರದ ಲುಕ್ ರಿವೀಲ್ ಆಗಲಿದೆ. ರಾಜ್ ಬಿ ಶೆಟ್ಟಿ, ಉಪೇಂದ್ರ ಒಟ್ಟಿಗೆ ಶಿವಣ್ಣ ನಟಿಸುತ್ತಿರುವ ’45’ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇದನ್ನೂ ಓದಿ:ಡಾರ್ಲಿಂಗ್ ಜಾಗಕ್ಕೆ ಬಂದ ನಟ ರಾಕ್ಷಸ: ಹಲಗಲಿ ಚಿತ್ರಕ್ಕೆ ಧನಂಜಯ್ ಹೀರೋ
ಇನ್ನೂ ಹೇಮಂತ್ ರಾವ್ ಜೊತೆಗಿನ ‘ಭೈರವನ ಕೊನೆ ಪಾಠ’ ಸಿನಿಮಾದ ಪೋಸ್ಟರ್ ಜು.12 ರಂದು ರಿವೀಲ್ ಆಗಲಿದೆ. ರಾಮ್ ಚರಣ್ (Ramcharan) ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲು ಶಿವಣ್ಣ ಓಕೆ ಎಂದಿದ್ದಾರೆ. ಈ ಚಿತ್ರದ ಅಧಿಕೃತ ಪೋಸ್ಟರ್ ಹೊರಬೀಳಲಿದೆ ಎಂಬ ಸುದ್ದಿ ಇದೆ. ಕನ್ನಡದ ಜೊತೆ ಪರಭಾಷೆಗಳಲ್ಲೂ ನಟನಿಗೆ ಬೇಡಿಕೆ ಹೆಚ್ಚಾಗಿದೆ. ಜೈಲರ್ ಸಿನಿಮಾದ ನಂತರ ಹೊಸ ಚಿತ್ರಗಳ ಆಫರ್ ಸಿಕ್ತಿದೆ. ಒಟ್ನಲ್ಲಿ ಈ ವರ್ಷ ಶಿವಣ್ಣ ಫ್ಯಾನ್ಸ್‌ಗೆ ಸಿನಿಮಾಗಳ ಹಬ್ಬವೋ ಹಬ್ಬ.