ಬಾಗಲಕೋಟೆ: ಜಾಮೀನು ಮೇಲೆ ಜೈಲಿನಿಂದ ಹೊರಬಂದ ಎಂಐಎಂ ಮುಖಂಡರಿಗೆ ಬಾಗಲಕೋಟೆಯಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಂಡಿದ್ದಾರೆ.
ಟಿಪ್ಪು ಜಯಂತಿ ಅಂಗವಾಗಿ ನಿಷೇಧಾಜ್ಞೆ ನಡುವೆಯೂ ನವಂಬರ್ 3 ರಂದು ಇಳಕಲ್ ಪಟ್ಟಣದಲ್ಲಿ ಕೆಲ ಮುಖಂಡರು ಮೆರವಣಿಗೆ ಅನುಮತಿ ನೀಡುವಂತೆ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಗರದಲ್ಲಿ ಪೊಲೀಸರ ಮೇಲೆ ಕೆಲವರು ಕಲ್ಲೂತೂರಾಟ ನಡೆಸಿದ್ದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು.
Advertisement
ಆ ಘಟನೆಗೆ ಸಂಬಂಧಿಸಿ ಎಂಐಎಂ ಮುಖಂಡ ಉಸ್ಮಾನಗಣಿ ಉಮನಾಬಾದ್, ಜೆಡಿಎಸ್ ಮುಖಂಡ ಜಬ್ಬರ ಕಲಬುರ್ಗಿ ಸೇರಿದಂತೆ 13 ಜನರ ಮೇಲೆ ದೂರು ದಾಖಲಾಗಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಸೋಮವಾರ ಜಾಮೀನಿನ ಮೇಲೆ ಹೊರಬಂದವರಿಗೆ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಳ್ಳಲಾಗಿದೆ.
Advertisement
ಇದನ್ನೂ ಓದಿ: ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ
Advertisement
Advertisement