ಬೆಂಗಳೂರು: ಆನೇಕಲ್‌ನ (Anekal) ಇತಿಹಾಸ ಪ್ರಸಿದ್ಧ ಧರ್ಮರಾಯಸ್ವಾಮಿ ದೇವಾಲಯದ ಒಣ ಕರಗ ಮಹೋತ್ಸವ (Ona Karaga Mahotsava) ಅದ್ಧೂರಿಯಾಗಿ ನೆರವೇರಿದೆ. ಒಣ ಕರಗವನ್ನು ಹೊತ್ತು ಸಾಗಿದ ದೇವಾಲಯದ ಅರ್ಚಕರಾದ ರಮೇಶ್ ಆನೇಕಲ್‌ನ ರಾಜಬೀದಿಗಳಲ್ಲಿ ನರ್ತನ ಮಾಡುತ್ತಾ ಗತ ವೈಭವ ನೆನೆಪಿಗೆ ಬರುವಂತೆ ಮಾಡಿದ್ದಾರೆ.
ಕರಗ ಮೊದಲಿಗೆ ಮಂಡಿಯೂರಿ ದೇವಾಲಯದಿಂದ ಹೊರ ಬಂದಿದ್ದು, ಹೊರಬಂದ ನಂತರ ಸಂತೆಮಾಳ ಸಮೀಪ ಕೆಂಡದ ಮೇಲೆ ಕರಗ ಹೊತ್ತ ರಮೇಶ್ ನರ್ತನ ಮಾಡಿ, ಬಳಿಕ ವೀರ ವಸಂತನ ಶಿರಚ್ಛೇದನ ಮುಗಿಸಿ ಅನಂತರ ಆನೇಕಲ್ ಪಟ್ಟಣದ ತಿಲಕ್ ವೃತ್ತ, ಉಳಿ ತಿಗಳರ ಬೀದಿ, ಅಂಬೇಡ್ಕರ್ ಕಾಲೋನಿ, ಕೆಇಬಿ ಕಚೇರಿ, ತಾಲೂಕು ಕಚೇರಿ ರಸ್ತೆ ಮಾರ್ಗವಾಗಿ ಮರಳಿ ದೇವಾಲಯದ ಬಳಿ ಕರಗ ನರ್ತನ ಮಾಡಿದ್ದು, ಕರಗ ಸಾಗುತ್ತಿದ್ದ ಎಲ್ಲೆಡೆ ಸಾವಿರಾರು ಮಂದಿ ಭಕ್ತಾದಿಗಳು ಕರಗವನ್ನು ನೋಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: Terminated – ಬೃಹತ್ ದಾಳಿಯಲ್ಲಿ ಇರಾನ್ ಮಿಲಿಟರಿ ಪಡೆಯ ಟಾಪ್ ಕಮಾಂಡರ್‌ಗಳ ಹತ್ಯೆ: ಟ್ರಂಪ್

ರಾಜ ಬೀದಿಗಳಲ್ಲಿ ಸಂಚಾರ ಮಾಡಿದ ದ್ರೌಪದಮ್ಮ ದೇವಿ ಕರಗ ಮುಂಜಾನೆ 6 ಘಂಟೆಗೆ ಮರಳಿ ಮಂಡಿಯೂರಿ ನರ್ತನ ಮಾಡುತ್ತಾ ದೇವಾಲಯ ತಲುಪಿದೆ. ಸಾಕಷ್ಟು ವಿವಾದಗಳಿಂದ ಕೂಡಿದ್ದ ಕರಗಕ್ಕೆ ಕಳೆದ ಬಾರಿ ಹೈಕೋರ್ಟ್ ತೆರೆ ಎಳೆದಿದ್ದು, ಮುಂದಿನ ಬಾರಿ ಇನ್ನಷ್ಟು ವಿಜೃಂಭಣೆಯಿAದ ಕರಗ ಮಹೋತ್ಸವ ನಡೆಯುವ ನಿರೀಕ್ಷೆ ಇದೆ. ಕರಗ ಸಾಗುವ ರಸ್ತೆಯುದ್ದಕ್ಕೂ ಮಲ್ಲಿಗೆ ಸೇರಿದಂತೆ ಹಲವು ಬಗೆಯ ಹೂವುಗಳನ್ನು ಹಾಕಿ ಭಕ್ತಾದಿಗಳು ಭಕ್ತಿಪೂರ್ವಕವಾಗಿ ತಮ್ಮ ತಮ್ಮ ಬೀದಿಗಳಿಗೆ ಬರಮಾಡಿಕೊಂಡಿದ್ದು ವಿಷೇಶವಾಗಿತ್ತು. ಇದನ್ನೂ ಓದಿ: ದಾವಣಗೆರೆಯಲ್ಲಿ ಪ್ರಚಾರದ ವೇಳೆ ಮುಸ್ಲಿಮರಿಂದ ‘ಗೋ ಬ್ಯಾಕ್ ಕಾಂಗ್ರೆಸ್’ ಪ್ರತಿಭಟನೆ

