-ಇತ್ತ ಸಿಕ್ಕಿಬಿದ್ದ ಕುಡುಕ ಆಂಬುಲೆನ್ಸ್ ಚಾಲಕ
ಬೆಂಗಳೂರು: ನಗರದಲ್ಲಿ ಚಾಲಕನೊಬ್ಬ ಸರ್ಕಾರಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಅವಾಂತರ ಸೃಷ್ಟಿ ಮಾಡಿದ್ರೆ, ಇತ್ತ ಕುಡಿದ ಮತ್ತಿನಲ್ಲಿ ಆಂಬುಲೆನ್ಸ್ ಚಲಾಯಿಸುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಸಂಪಗಿರಾಮನಗರದ 4ನೇ ಮುಖ್ಯ ರಸ್ತೆಯಲ್ಲಿ ಈ ಅವಘಢ ಸಂಭವಿಸಿದೆ. ಸಫಾರಿ ಕರ್ಮಚಾರಿ ಆಯೋಗದ ಮುಖ್ಯಸ್ಥರ ಕಾರನ್ನು ಬೇಕಾಬಿಟ್ಟಿಯಾಗಿ ಡ್ರೈವ್ ಮಾಡಿ ಗೋಡೆ ಮತ್ತು ಕಾರುಗಳಿಗೆ ಡಿಕ್ಕಿ ಹೊಡೆಸಿದ್ದಾನೆ.
Advertisement
Advertisement
ಈತನ ತಂದೆ ಅಧ್ಯಕ್ಷರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಗನಿಗೆ ಕಾರುಗಳ ಕ್ರೇಜ್ ಹೆಚ್ಚಾಗಿ ತನ್ನ ತಂದೆಗೆ ಗೊತ್ತಾಗದಂತೆ ಕಾರು ಕೀ ತೆಗೆದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ರೋಗಿಗಳ ಜೀವ ಉಳಿಸಲು ಅಂತಾನೇ ಇರೋದು ಅಂಬುಲೆನ್ಸ್. ಆದ್ರೆ ಇಲ್ಲೊಬ್ಬ ಅಂಬ್ಯುಲೆನ್ಸ್ ಚಾಲಕ ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಲಾಯಿಸಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Advertisement
ಪೂಜಪ್ಪ ಅನ್ನೋ ಚಾಲಕ ಮಲ್ಲೇಶ್ವರಂನಿಂದ ಇಲೆಕ್ಟ್ರಾನಿಕ್ ಸಿಟಿ ಕಡೆಗೆ ಅಂಬ್ಯುಲೆನ್ಸ್‍ನಲ್ಲಿ ಹೋಗ್ತಿದ್ದ. ಕಾರ್ಪೋರೇಷನ್ ಬಳಿ ಈತನನ್ನು ತಡೆದು ನಿಲ್ಲಿಸಿದ ಹಲಸೂರು ಠಾಣೆ ಸಂಚಾರಿ ಪೊಲೀಸರು ಕುಡಿದಿದ್ದಾನೋ ಇಲ್ವೋ ಅಂತಾ ಚೆಕ್ ಮಾಡಿದ್ರು. ಆಗ ಈತ ಕಂಠಪೂರ್ತಿ ಕುಡಿದಿರೋದು ಸಾಬೀತಾಗಿದೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.