ಬೆಂಗಳೂರು: ಜುಲೈ 1ರಿಂದ ಸರಕು ಮತ್ತು ಸೇವ ತೆರಿಗೆ ಜಾರಿಯಾಗುವ ಹಿನ್ನೆಲೆಯಲ್ಲಿ ಮಹಿಳಾ ಮಣಿಗಳು ಚಿನ್ನದ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದಾರೆ.
ಜಿಎಸ್‍ಟಿ ಜಾರಿಯಾದರೆ ಈಗಿರುವ ದರದಲ್ಲಿ ಒಂದು ಗ್ರಾಂಗೆ 60 ರೂಪಾಯಿ ಏರಿಕೆಯಾಗುವುದರಿಂದ ಚಿನ್ನದ ಅಂಗಡಿ ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದೆ.
Advertisement
ಚಿನ್ನದ ಅಂಗಡಿಗಳು ಸಾಮಾನ್ಯವಾಗಿ 8.30ಕ್ಕೆ ಮುಚ್ಚುತ್ತವೆ. ಆದರೆ ಜಿಎಸ್‍ಟಿ ಎಫೆಕ್ಟ್ ನಿಂದಾಗಿ ಮಾಲೀಕರು ಒಂದು ಗಂಟೆ ವಿಸ್ತರಣೆ ಮಾಡಿದ್ದಾರೆ. ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ತೆರೆಯಲು ಮುಂದಾಗಿದ್ದೇವೆ ಎಂದು ಆರ್ ಆರ್ ಗೋಲ್ಡ್ ಪ್ಯಾಲೇಸ್ ಮಾಲೀಕ ರಮೇಶ್ ಹೇಳಿದ್ದಾರೆ.
Advertisement
ಚಿನ್ನದ ದರ ಏರಿಕೆಯಾಗಲಿರುವ ಹಿನ್ನೆಲೆಯಲ್ಲಿ ಖರೀದಿಗೆ ಬಂದಿದ್ದೇವೆ. ಆಷಾಢದಲ್ಲಿ ಖರೀದಿ ಮಾಡಬಾರದು ಎಂಬ ನಂಬಿಕೆ ಇದ್ದರೂ ಖರೀದಿ ಅನಿವಾರ್ಯವಾಗಿದೆ. ಜುಲೈ ನಿಂದ ಎಷ್ಟು ಏರಿಕೆಯಾಗುತ್ತದೋ ಗೊತ್ತಾಗಲ್ಲ. ಅದಕ್ಕೆ ಇವತ್ತೆ ಬಂದಿದ್ದೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ.
Advertisement
ಎಷ್ಟು ಏರಿಕೆಯಾಗುತ್ತೆ?
ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಂಡಳಿಯು ಚಿನ್ನ ಮತ್ತು ಬೆಳ್ಳಿಗೆ ಶೇ.3, ಬಿಸ್ಕತ್‍ಗೆ ಶೇ.18ರಷ್ಟು ತೆರಿಗೆ ದರಗಳನ್ನು ನಿಗದಿ ಮಾಡಿದೆ. ಸದ್ಯ ಇರುವ ತೆರಿಗೆ ವ್ಯವಸ್ಥೆಯಲ್ಲಿ, ಚಿನ್ನಕ್ಕೆ ಶೇ.10 ರಷ್ಟು ಆಮದು ಸುಂಕ ಇದ್ದು ಒಟ್ಟು ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್‍ಟಿಯಲ್ಲಿ ಚಿನ್ನಕ್ಕೆ ಶೇ.3 ರಷ್ಟು ತೆರಿಗೆ ನಿಗದಿಮಾಡಲಾಗಿದ್ದು, ಇದಕ್ಕೆ ಶೇ.10 ರಷ್ಟು ಆಮದು ಸುಂಕ ಸೇರಿಸಿದರೆ ಒಟ್ಟು ತೆರಿಗೆ ಶೇ.13 ಆಗುತ್ತದೆ. ಅಂದರೆ ಶೇ.1 ರಷ್ಟು ಹೆಚ್ಚಾಗಲಿದೆ.
Advertisement