ಚಿಕ್ಕಬಳ್ಳಾಪುರ: ಜಾರ್ಜಿಯಾದಲ್ಲಿ (Georgia) ನಡೆದ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‍ನಲ್ಲಿ (International Chess Championship) ಚಿನ್ನದ ಪದಕ (Gold medal) ಗೆದ್ದು ಬೆಂಗಳೂರಿಗೆ ಬಂದ ಬಾಲಕಿಗೆ ಭವ್ಯ ಸ್ವಾಗತ ಕೋರಲಾಗಿದೆ.
Advertisement
ಹಾಸನ (Hassan) ಜಿಲ್ಲೆಯ ಶ್ರವಣಬೆಳಗೊಳ (Shravanbela Gola) ತಾಲೂಕಿನ ಜಿನ್ನೆನಹಳ್ಳಿಯ ಚಾರ್ವಿ (Charvy) ಸಾಧನೆ ಮಾಡಿದ ಬಾಲಕಿ. ಸೆಪ್ಟೆಂಬರ್ 27 ರಂದು ನಡೆದ ಪಂದ್ಯದಲ್ಲಿ ಚಿನ್ನ ಗೆದ್ದು ಚಾಂಪಿಯನ್ ಆದ ಚಾರ್ವಿ ಇಂದು ತಾಯ್ನಾಡಿಗೆ ಆಗಮಿಸಿದಳು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬಾಲಕಿಗೆ ಪೋಷಕರು ಮತ್ತು ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್(Karnataka State Chess Association)ನಿಂದ ಅದ್ದೂರಿ ಸ್ವಾಗತ ಕೋರಲಾಗಿದೆ. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ IAS ಅಧಿಕಾರಿ ವೀಡಿಯೋ ವೈರಲ್
Advertisement
Advertisement
ಡೊಳ್ಳು ಕುಣಿತದೊಂದಿಗೆ ಸಡಗರ ಸಂಭ್ರಮದಿಂದ ಬಾಲಕಿಯನ್ನು ಬರಮಾಡಿಕೊಳ್ಳಲಾಗಿದ್ದು, ತೆರೆದ ವಾಹನದಲ್ಲಿ ಬೆಂಗಳೂರಿನವರೆಗೂ ಮೆರವಣಿಗೆ ನಡೆಸಲಾಗಿದೆ. ಅಂದಹಾಗೆ 8 ವರ್ಷದ ವಿಭಾಗದಲ್ಲಿ ವಿವಿಧ ದೇಶಗಳಿಂದ ಭಾಗವಹಿಸಿದ್ದ 83 ಜನ ಬಾಲಕಿಯರ ಪೈಕಿ ನಮ್ಮ ರಾಜ್ಯದ ಈ ಬಾಲಕಿ ಚಿನ್ನದ ಪದಕ ಗೆದ್ದು ಕರುನಾಡ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಇದನ್ನೂ ಓದಿ: ಎಲ್ಲಾ ಮಹಿಳೆಯರು ಸುರಕ್ಷಿತ ವೈದ್ಯಕೀಯ ಗರ್ಭಪಾತಕ್ಕೆ ಅರ್ಹರು: ಸುಪ್ರೀಂಕೋರ್ಟ್